ಗುರುಗ್ರಾಮ: ನಮಾಝ್ ವೇಳೆ ಮತ್ತೆ ಗದ್ದಲ ಸೃಷ್ಟಿಸಿದ ಸಂಘಪರಿವಾರ
Photo: ndtv.com
ಹೊಸದಿಲ್ಲಿ: ಗುರುಗ್ರಾಮ ಸೆಕ್ಟರ್ 37 ರಲ್ಲಿ ಗೊತ್ತುಪಡಿಸಿದ ತೆರೆದ ಸ್ಥಳದಲ್ಲಿ ನಮಾಝ್ ಮಾಡುತ್ತಿದ್ದ ಮುಸ್ಲಿಮರಿಗೆ ಸಂಘಪರಿವಾರದವರು ಮತ್ತೊಮ್ಮೆ ಅಡ್ಡಿಪಡಿಸಿದ್ದಾರೆ. ಈ ಗದ್ದಲದಿಂದಾಗಿ ಸ್ಥಳದಲ್ಲಿ ಸ್ವಲ್ಪ ಕಾಲ ಉದ್ವಿಗ್ನತೆ ಉಂಟಾಯಿತು ಎಂದು ndtv.com ವರದಿ ಮಾಡಿದೆ.
ನೆರೆದಿದ್ದ ಮುಸ್ಲಿಮರು ಆರಂಭದಲ್ಲಿ ಪ್ರಾರ್ಥನೆ ಮಾಡದೆಯೇ ಹೊರಡಲು ಯೋಜಿಸಿದ್ದರು, ಆದರೆ ನಂತರ ಸುಮಾರು 25 ಮಂದಿ ನಮಾಝ್ ಮಾಡಲು ನಿರ್ಧರಿಸಿದರು. ನಮಾಝ್ ಮಾಡುತ್ತಿದ್ದ 30 ಮೀಟರ್ಗಿಂತ ಕಡಿಮೆ ದೂರದಲ್ಲಿ ಸಂಘಪರಿವಾರದವರು 'ಜೈ ಶ್ರೀ ರಾಮ್' ಮತ್ತು 'ಭಾರತ್ ಮಾತಾ ಕಿ ಜೈ' ಘೋಷಣೆಗಳನ್ನು ಕೂಗಿದರು. 150 ಪೊಲೀಸರು ಸ್ಥಳದಲ್ಲಿದ್ದರು.
ಇಂದು ನಗರದ ಗುರುದ್ವಾರಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲಿಲ್ಲ.
ಮುಸ್ಲಿಮರು "ನಮಾಝ್ ಗಾಗಿ ಜಾಗವನ್ನು ಕೇಳದ ಕಾರಣ" ಜಾಗವನ್ನು ನೀಡಲಾಗುವುದಿಲ್ಲ ಎಂದು ನಗರದ ಗುರುದ್ವಾರ ಸಿಂಗ್ ಸಭಾ ಸಮಿತಿಯು ಹೇಳಿದೆ, ಆದರೆ ಅಲ್ಪಸಂಖ್ಯಾತ ಸಮುದಾಯದೊಂದಿಗೆ ನಿಲ್ಲುವ ತನ್ನ ಸಂಕಲ್ಪವನ್ನು ಒತ್ತಿ ಹೇಳಿದೆ.
Next Story