ರಾಜಸ್ಥಾನ: ದಲಿತ ಯುವಕನ ಮದುವೆ ಮೆರವಣಿಗೆ ಮೇಲೆ ಕಲ್ಲು ತೂರಾಟ,ಆರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ
ಜೈಪುರ,ನ.26: ತಮ್ಮ ಇಚ್ಛೆಗೆ ವಿರುದ್ಧವಾಗಿ ಕುದುರೆಯ ಮೇಲೆ ಸಾಗುತ್ತಿದ್ದಕ್ಕಾಗಿ ದಲಿತ ಯುವಕನ ಮದುವೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ತಡರಾತ್ರಿ ಜೈಪುರದ ಕೋಟಪುತ್ಲಿ ಪಟ್ಟಣದಲ್ಲಿ ನಡೆದ ಈ ಘಟನೆಯಲ್ಲಿ 12 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮದುವೆ ಸಮಾರಂಭದಲ್ಲಿ ದಲಿತನೋರ್ವ ಕುದುರೆ ಸವಾರಿ ಮಾಡುವುದನ್ನು ನಿರ್ದಿಷ್ಟ ಸಮುದಾಯವೊಂದರ ಕೆಲವರು ಆಕ್ಷೇಪಿಸಿದ್ದರು. ತೊಂದರೆಯನ್ನು ನಿರೀಕ್ಷಿಸಿ ವರನ ಕುಟುಂಬದವರು ಮದುವೆಗೆ ಮುನ್ನ ಪೊಲೀಸ್ ದೂರನ್ನು ಸಲ್ಲಿಸಿದ್ದರು. ಅದರಂತೆ ಮದುವೆ ಸುಗಮವಾಗಿ ನಡೆಯುವಂತಾಗಲು ಪೊಲೀಸ್ ತಂಡವೊಂದನ್ನು ನಿಯೋಜಿಸಲಾಗಿತ್ತು, ಆದಾಗ್ಯೂ ಕೆಲವರು ಮೆರವಣಿಗೆಯ ಮೇಲೆ ಕಲ್ಲುಗಳನ್ನು ತೂರಿದ್ದಾರೆ ಎಂದು ಪ್ರಾಗ್ಪುರಾ ಠಾಣಾಧಿಕಾರಿ ಶಿವಶಂಕರ ತಿಳಿಸಿದರು.
ಸಂತ್ರಸ್ತ ಕುಟುಂಬದ ಇನ್ನೋರ್ವ ಯುವಕನ ಮದುವೆ ಸದ್ಯವೇ ನಡೆಯಲಿದ್ದು,ಸಾಕಷ್ಟು ಭದ್ರತೆಯನ್ನು ಒದಗಿಸಲಾಗುವುದು ಎಂದರು.
Next Story