ಅಂಚೆ ಕಚೇರಿಗಳಲ್ಲಿ ವಿಕಲಚೇತನರಿಗೆ ಆಧಾರ್ ಸೇವೆ
ಮಂಗಳೂರು, ನ.26: ವಿಶ್ವ ವಿಕಲಚೇತನರ ದಿನ (ಡಿ.3)ದ ಪ್ರಯುಕ್ತ ಮಂಗಳೂರು ಅಂಚೆ ವಿಭಾಗದ ಎಲ್ಲಾ ಅಂಚೆ ಕಚೇರಿಗಳಲ್ಲಿ ವಾರವಿಡೀ (ನ.29ರಿಂದ ಡಿ. 4ರವರೆಗೆ) ಹಾಗೂ ಮುಂದಿನ ಎಲ್ಲಾ ಶನಿವಾರಗಳಂದು ವಿಕಲಚೇತನರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಆದ್ಯತೆಯ ಮೇರೆಗೆ ಆಧಾರ್ ಸೇವೆಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅಂಚೆ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.
ವಿಕಲಚೇತನರಿಂದ ಬೇಡಿಕೆ ಇಲ್ಲದಿದ್ದರೆ ಆ ದಿನಗಳಂದು ಇತರರಿಗೆ ಆಧಾರ್ ಸೇವೆ ನೀಡಲಾಗುವುದು. ಅಗತ್ಯವುಳ್ಳ ವಿಕಲಚೇತನರು/ ಸಂಬಂಧ ಪಟ್ಟ ಅವರ ಪೋಷಕರು ಮುಂಚಿತವಾಗಿ ನಿಗದಿತ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ದೂರವಾಣಿಯಲ್ಲಿ ಸಂಪರ್ಕಿಸಿ ಟೋಕನನ್ನು ಪಡೆದುಕೊಳ್ಳಬೇಕು ಹಾಗೂ ಆಧಾರ್ ನೋಂದಣಿ/ತಿದ್ದುಪಡಿಗೆ ಬೇಕಾಗುವ ದಾಖಲೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಸೂಕ್ತ ದಾಖಲೆಗಳೊಂದಿಗೆ ಅಂಚೆ ಕಚೇರಿಗೆ ಭೇಟಿ (ಬೆಳಗ್ಗೆ 9ರಿಂದ ಸಂಜೆ 5ರವರೆಗೆ) ನೀಡಿ ಆಧಾರ್ ಸೇವೆಯನ್ನು ಪಡೆದುಕೊಳ್ಳಬಹುದು. ಮಾಹಿತಿಗಾಗಿ ಮಂಗಳೂರು ವಿಭಾಗೀಯ ಅಂಚೆ ಕಚೇರಿಯ (ಮೊ.ಸಂ:9448291072)ನ್ನು ಸಂಪರ್ಕಿಸಬಹುದಾಗಿದೆ.





