ಕೋವಿಡ್-19 ಭೀತಿ ಹಿನ್ನೆಲೆ: ಮಹಿಳಾ ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯ ರದ್ದುಪಡಿಸಿದ ಐಸಿಸಿ

ಹೊಸದಿಲ್ಲಿ: ಝಿಂಬಾಬ್ವೆಯಲ್ಲಿ ನಡೆಯಬೇಕಾಗಿದ್ದ ಮಹಿಳಾ ಕ್ರಿಕೆಟ್ ವಿಶ್ವಕಪ್ 2021 ಕ್ವಾಲಿಫೈಯರ್ ಅನ್ನು ಐಸಿಸಿ ರದ್ದುಪಡಿಸಿದೆ. ಈ ಕ್ವಾಲಿಫೈಯರ್ ಡಿಸೆಂಬರ್ 5 ರವರೆಗೆ ನಡೆಯಬೇಕಿತ್ತು.
ಅಧಿಕೃತ ಹೇಳಿಕೆಯ ಪ್ರಕಾರ ಕೋವಿಡ್-19 ನ ಭೀತಿಯು ಈ ನಿರ್ಧಾರಕ್ಕೆ ಕಾರಣವಾಗಿದೆ.
ಮುಂದಿನ ವರ್ಷ ನ್ಯೂಝಿಲ್ಯಾಂಡ್‌ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್‌ಗೆ ಅಂತಿಮ ಮೂರು ಸ್ಥಾನಗಳನ್ನು ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನ ನ ಉಳಿದ ಎರಡು ಸ್ಥಾನಗಳನ್ನು ಈ ಪಂದ್ಯಾವಳಿಯು ನಿರ್ಧರಿಸುತ್ತದೆ.
Next Story