ಹೊಸ ಕೋವಿಡ್ ಪ್ರಭೇದ ಹೆಚ್ಚು ಅಪಾಯಕಾರಿ: ರಾಹುಲ್ ಗಾಂಧಿ
ಲಸಿಕೆ ನೀಡಿಕೆಯ ಬಗ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ
ಹೊಸದಿಲ್ಲಿ,ನ.27: ಹೊಸ ಕೋವಿಡ್ ಪ್ರಭೇದ ‘ಒಮಿಕ್ರಾನ್ ’ ಗಂಭೀರ ಅಪಾಯದ ಬೆದರಿಕೆಯಾಗಿದೆ ಎಂದು ಶನಿವಾರ ಬಣ್ಣಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,ಲಸಿಕೆ ನೀಡಿಕೆ ಕುರಿತು ಸುಳ್ಳು ಅಂಕಿಅಂಶಗಳನ್ನು ಹೆಚ್ಚು ಕಾಲ ಬಚ್ಚಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹೊಸ ರೂಪಾಂತರಿಯು ಗಂಭೀರ ಬೆದರಿಕೆಯಾಗಿದೆ. ದೇಶದ ಜನತೆಗೆ ಲಸಿಕೆಯನ್ನು ಒದಗಿಸುವ ಕುರಿತು ಸರಕಾರವು ಗಂಭೀರವಾಗಬೇಕು. ಲಸಿಕೆ ನೀಡಿಕೆ ಕುರಿತು ಸುಳ್ಳು ಅಂಕಿಅಂಶಗಳನ್ನು ಒಬ್ಬ ವ್ಯಕ್ತಿಯ ಚಿತ್ರದ ಹಿಂದೆ ಹೆಚ್ಚು ಸಮಯ ಬಚ್ಚಿಡಲು ಸಾಧ್ಯವಿಲ್ಲ ’ಎಂದು ರಾಹುಲ್ ಟ್ವೀಟಿಸಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿರುವಂತೆ ದೇಶದಲ್ಲಿ ಈವರೆಗೆ 121.06 ಕೋಟಿ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ.
Next Story