ಮೈಸೂರಿನ ಎರಡು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೋನ ದೃಢ

ಮೈಸೂರು: ಮೈಸೂರು ನಗರದಲ್ಲಿಕೊರೋನ ಸೋಂಕು ಹೆಚ್ಚಾಗುತ್ತಿದ್ದು, ನಗರದಎರಡು ನರ್ಸಿಂಗ್ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳೀಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ.
ನಗರದ ಸೆಂಟ್‍ಜೋಸೆಫ್ ಮತ್ತುಕಾವೇರಿ ನರ್ಸಿಂಗ್ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಕಳೆದ ಎರಡು ದಿನಗಳಿಂದ ಕೊರೋನ ಸೋಂಕು ದೃಢಪಟ್ಟಿದ್ದು, ಎಲ್ಲರಲ್ಲೂ ಆತಂಕಉಂಟು ಮಾಡಿದೆ.
ಕೊರೋನ ಆರ್‍ಟಿಪಿಸಿಆರ್ ಪರೀಕ್ಷೆಗೊಳಪಟ್ಟರೆ ನೆಗೆಟಿವ್ ವರದಿ ಬರುತ್ತದಾದರೂ ಸಿಟಿ ಸ್ಕ್ಯಾನ್ ನಲ್ಲಿಕೊರೋನದೃಢ ಪಡುತ್ತಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಕೊರೋನ ಸೋಂಕು ಮತ್ತೆ ಹೆಚ್ಚಾಗುತ್ತಿದ್ದು, ಮೈಸೂರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಇದೆ. ಹಾಗಾಗಿ ಸಾರ್ವಜನಿಕರುಎಚ್ಚೆತ್ತು ಕೊಂಡುಜಾಗೃತೆಯಿಂದ ಇರಬೇಕಾಗಿದೆ ಎಂದು ಹೇಳಿದರು.
Next Story





