ಮೊದಲ ಟೆಸ್ಟ್: ಭಾರತ 234 ರನ್ಗಳಿಗೆ ಡಿಕ್ಲೇರ್; ನ್ಯೂಝಿಲ್ಯಾಂಡ್ ಗೆ 283 ರನ್ ಗುರಿ
Photo: Twitter/@BCCI
ಕಾನ್ಪುರ: ಶ್ರೇಯಸ್ ಅಯ್ಯರ್ (65) ಮತ್ತು ವೃದ್ಧಿಮಾನ್ ಸಹಾ ಅಜೇಯ 61 ರನ್ ನೆರವಿನೊಂದಿಗೆ ಭಾರತವು ಎರಡನೆ ಇನ್ನಿಂಗ್ಸ್ ನಲ್ಲಿ 234 ರನ್ ಗಳಿಸಿ ಡಿಕ್ಲೇರ್ ಮಾಡಿದ್ದು, ನ್ಯೂಝಿಲ್ಯಾಂಡ್ ಗೆ 283 ರನ್ ಗುರಿ ನೀಡಿದೆ.
ಮೊದಲ ಕ್ರಿಕೆಟ್ ಟೆಸ್ಟ್ ನಾಲ್ಕನೇ ದಿನವಾದ ರವಿವಾರ ಭಾರತ ಏಳು ವಿಕೆಟ್ ಕಳೆದುಕೊಂಡು 234 ರನ್ಗಳಿಗೆ ಡಿಕ್ಲೇರ್ ಮಾಡಿತು. ನ್ಯೂಜಿಲೆಂಡ್ ಪರ ಕೈಲ್ ಜಮಿಸನ್ ಮತ್ತು ಟಿಮ್ ಸೌಥಿ ತಲಾ ಮೂರು ವಿಕೆಟ್ ಪಡೆದರು.
51 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಭಾರತ ನಂತರ ಶ್ರೇಯಸ್ ಅಯ್ಯರ್ 65, ಸಹಾ 61, ಅಶ್ವಿನ್ 32, ಮತ್ತು ಅಕ್ಷರ್ ಪಟೇಲ್ 28 ರನ್ ಗಳಿಸಿ ನ್ಯೂಝಿಲ್ಯಾಂಡ್ ಗೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾದರು.
Next Story