ಮಾಸ್ಟರ್ ಚಾಂಪಿಯನ್ಶಿಪ್ ಈಜು ಸ್ಪರ್ಧೆ : ಕೋಚ್ ಪಾರ್ಥ ವಾರಣಾಸಿಗೆ 6 ಪದಕ
ಮಂಗಳೂರು : ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾದ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ನಲ್ಲಿ ಪುತ್ತೂರು ಅಕ್ವೆಟಿಂಕ್ ಕ್ಲಬ್ನ ಕೋಚ್ ಪಾರ್ಥ ವಾರಣಾಸಿ 5 ಚಿನ್ನ ಹಾಗೂ 1 ಕಂಚಿನ ಪದಕವನ್ನು ಪಡೆದಿದ್ದಾರೆ.
100 ಮೀಟರ್ ಫ್ರೀಸ್ಟೈಲ್ಸ, 50 ಮೀಟರ್ ಬಟರ್ಫ್ಲೈ, 50 ಮೀಟರ್ ಬ್ಯಾಕ್ಸ್ಟ್ರೋಕ್, 4x50 ಮೀಟರ್ ಫ್ರೀಸ್ಟೈಲ್ ರಿಲೇ ಮತ್ತು 50 ಮೀಟರ್ ಫ್ರೀಸ್ಟೈಲ್ನಲ್ಲಿ ಚಿನ್ನದ ಪದಕ ಹಾಗೂ 4x50 ಮೀಟರ್ ಮೆಡ್ಲೇ ರಿಲೇಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಸೌತ್ ಕೊರಿಯಾದಲ್ಲಿ ನಡೆದ ಫಿನಾ 2010 ವಿಶ್ವ ಚಾಂಪಿಯನ್ ಶಿಪ್ನಲ್ಲಿ ಕೋಚ್ ಆಗಿ ಪಾರ್ಥ ವಾರಣಾಸಿಯವರು ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಸರ್ಫ್ ಲೈಫ್ ಸೇವಿಂಗ್, ಇಂಡಿಯಾದ ನಿರ್ದೇಶಕರಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ.
Next Story