Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿ.ವಿ. ನಿವೃತ್ತ ಉಪನ್ಯಾಸಕರ 299 ಕೋಟಿ...

ವಿ.ವಿ. ನಿವೃತ್ತ ಉಪನ್ಯಾಸಕರ 299 ಕೋಟಿ ರೂ. ಪಿಂಚಣಿ ಬಾಕಿ

ವಿಶ್ವವಿದ್ಯಾನಿಲಯಗಳ ಕೋರಿಕೆಗೆ ಇನ್ನೂ ಸ್ಪಂದಿಸದ ಸರಕಾರ

ಜಿ. ಮಹಾಂತೇಶ್ಜಿ. ಮಹಾಂತೇಶ್29 Nov 2021 7:51 AM IST
share
ವಿ.ವಿ. ನಿವೃತ್ತ ಉಪನ್ಯಾಸಕರ 299 ಕೋಟಿ ರೂ. ಪಿಂಚಣಿ ಬಾಕಿ

ಬೆಂಗಳೂರು, ನ.29: ಕೋವಿಡ್ ಆರ್ಥಿಕ ಸಂಕಷ್ಟವನ್ನು ಮುಂದೊಡ್ಡಿರುವ ರಾಜ್ಯ ಸರಕಾರವು ಮಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ರಾಜ್ಯದ ವಿಶ್ವವಿದ್ಯಾನಿಲಯಗಳ ವಯೋ ನಿವೃತ್ತಿ, ಸ್ವಯಂ ನಿವೃತ್ತಿ ಹೊಂದಿರುವ ಅಧ್ಯಾಪಕರು, ಪ್ರಾಧ್ಯಾಪಕರಿಗೆ ಕುಟುಂಬ ಪಿಂಚಣಿ, ವಿಶ್ರಾಂತಿ ವೇತನ, ಮರಣ ಉಪದಾನ ಮತ್ತು ನಿವೃತ್ತಿ ಉಪದಾನಗಳ ಶೀರ್ಷಿಕೆಯಡಿಯಲ್ಲಿ ಅಂದಾಜು 299.24 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ.

ವಿಶ್ವವಿದ್ಯಾನಿಲಯಗಳಲ್ಲಿ 2016ರ ನಂತರ ನಿವೃತ್ತಿ ಹೊಂದಿದ ಪ್ರಾಧ್ಯಾಪಕರಿಗೆ ಪಿಂಚಣಿ ಸೌಲಭ್ಯಗಳನ್ನು ನೀಡಲು ರಾಜ್ಯದ ಸಾಂಪ್ರದಾಯಿಕ 17 ವಿಶ್ವವಿದ್ಯಾನಿಲಯಗಳು ಸಲ್ಲಿಸಿರುವ ಅನುದಾನದ ಕೋರಿಕೆ ಪ್ರಸ್ತಾವನೆಗಳು ಸರಕಾರದ ಹಂತದಲ್ಲೇ ನನೆಗುದಿಗೆ ಬಿದ್ದಿವೆ. ಇದರಲ್ಲಿ ಯುಜಿಸಿ 7ನೇ ಆಯೋಗದ ಅನ್ವಯ ಪರಿಷ್ಕೃತ ವೇತನಕ್ಕೆ ಪರಿಷ್ಕರಿಸಿರುವ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳ ಪಾವತಿಯ ಮೊತ್ತವೂ ಸೇರಿದೆ.

ರಾಜ್ಯದ ವಿಶ್ವವಿದ್ಯಾನಿಲಯಗಳ ಪೈಕಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಳೆದ ಹಲವು ವರ್ಷಗಳಿಂದಲೂ 11,83,57,195 ರೂ. ಬಾಕಿ ಇರುವುದು ದಾಖಲೆಯಿಂದ ತಿಳಿದು ಬಂದಿದೆ.

ಯುಜಿಸಿ 7ನೇ ಆಯೋಗದನ್ವಯ ಪರಿಷ್ಕೃತ ವೇತನಕ್ಕೆ ಪರಿಷ್ಕರಿಸಿರುವ ಪಿಂಚಣಿ, ಪಿಂಚಣಿ ಸೌಲಭ್ಯಗಳ ಪಾವತಿಗಾಗಿ ಮೈಸೂರು ವಿಶ್ವವಿದ್ಯಾನಿಲಯವು ಒಟ್ಟು 15,14,43,829 ಕೋಟಿ ರೂ.ಮತ್ತು ಕಾಲೇಜು, ತಾಂತ್ರಿಕ ಶಿಕ್ಷಣ ಇಲಾಖೆ ್ಯಾಪ್ತಿಯ ಸರಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ 2016ರ ನಂತರ ನಿವೃತ್ತಿ ಹೊಂದಿರುವ ಅಧ್ಯಾಪಕರುಗಳಿಗೆ 2016ನೇ ಯುಜಿಸಿ ಪರಿಷ್ಕೃತ ಪಿಂಚಣಿ ಸೌಲಭ್ಯದ 154.57 ಕೋಟಿ ರೂ. ಗಳ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದೆ.

ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ 2016ರ ನಂತರ ವಯೋ ನಿವೃತ್ತಿ, ಸ್ವಯಂ ನಿವೃತ್ತಿ ಹೊಂದಿರುವ ಪ್ರಾಧ್ಯಾಪಕರಿಗೆ ಒಟ್ಟು 299, 24,33,378 ರೂ. ಅನುದಾನ ಕೋರಿಕೆ ಸಲ್ಲಿಸಿ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಿಸಿಕೊಡಲು ಉನ್ನತ ಶಿಕ್ಷಣ ಇಲಾಖೆಯು ಕಳೆದ ಒಂದು ವರ್ಷದಿಂದ ಆರ್ಥಿಕ ಇಲಾಖೆಯ ಜತೆ ಪತ್ರವ್ಯವಹಾರಗಳಲ್ಲೇ ಕಾಲಹರಣ ಮಾಡಿರುವುದು ಇಲಾಖೆಯ ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.

2016ರ ಜನವರಿ 1ರ ನಂತರ ವಯೋ ನಿವೃತ್ತಿ ಹೊಂದಿರುವ ಅಧ್ಯಾಪಕರುಗಳಿಗೆ 7ನೇ ವೇತನ ಆಯೋಗದ ಅನ್ವಯ ಪರಿಷ್ಕೃತ ವೇತನಕ್ಕೆ ಪಿಂಚಣಿ ಸೌಲಭ್ಯಗಳನ್ನು ಮಂಜೂರು ಮಾಡಿತ್ತು. ಮೇ 2020ರ ನಂತರ ಪ್ರತಿತಿಂಗಳು ಪಿಂಚಣಿಯನ್ನು ಮಾತ್ರ ಪಾವತಿಸಲಾಗುತ್ತಿದೆ. 2016ರ ನಂತರ ನಿವೃತ್ತಿ ಹೊಂದಿದ ಅಧ್ಯಾಪಕರಿಗೆ ಇತರ ಪಿಂಚಣಿ ಸೌಲಭ್ಯಗಳನ್ನು ನೀಡಲು 50, 70, 91, 704 ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲು ಮೈಸೂರು ವಿಶ್ವವಿದ್ಯಾನಿಲಯವು ಸರಕಾರಕ್ಕೆ ಕೋರಿಕೆ ಸಲ್ಲಿಸಿತ್ತು ಎಂದು ತಿಳಿದು ಬಂದಿದೆ. ಅಲ್ಲದೆ ಯುಜಿಸಿ 7ನೇ ವೇತನ ಪರಿಷ್ಕೃತ ವೇತನ ವ್ಯತ್ಯಾಸದ ಪಾವತಿಗಾಗಿ ಸರಕಾರದಿಂದ ಬಿಡುಗಡೆಗೊಳಿಸಿರುವ 78,14,40,000 ರೂ.ಗಳ ಅನುದಾನದಲ್ಲಿ ವೇತನ ವ್ಯತ್ಯಾಸ ಪಾವತಿಸಿ ಉಳಿದಿರುವ ಬಾಕಿ ಮೊತ್ತವನ್ನು ಯುಜಿಸಿ 7ನೇ ಪರಿಷ್ಕೃತ ವೇತನದ ಅನ್ವಯ ಪರಿಷ್ಕೃತಗೊಂಡ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳ ವ್ಯತ್ಯಾಸದ ಮೊತ್ತವನ್ನು ಪಾವತಿಸಲು ಉಪಯೋಗಿಸಲು ಆಡಳಿತಾತ್ಮಕ ಆದೇಶಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು ಎಂದು ಗೊತ್ತಾಗಿದೆ.

ಪಿಂಚಣಿ ಅನುದಾನ ಕೋರಿಕೆ ಪಟ್ಟಿ

ಮೈಸೂರು ವಿಶ್ವವಿದ್ಯಾನಿಲಯ - 50,70, 91,704 ರೂ.

ಕರ್ನಾಟಕ ವಿವಿ - 5,72,23,832 ರೂ.

ಗುಲ್ಬರ್ಗಾ ವಿವಿ - 7,29,17,585 ರೂ.

ಮಂಗಳೂರು ವಿವಿ - 11,83,57,195 ರೂ.

ಕನ್ನಡ ವಿವಿ - 4,59,90,595 ರೂ.

ಕುವೆಂಪು ವಿವಿ - 1,40, 85,509 ರೂ.

ಅಕ್ಕಮಹಾದೇವಿ ಮಹಿಳಾ ವಿವಿ - 80,20,341 ರೂ.

ದಾವಣಗೆರೆ ವಿವಿ - 6,49,55,545 ರೂ.

ವಿಜಯನಗರ ವಿವಿ - 1,19,37,694 ರೂ.

ಬೆಳಗಾವಿ ವಿವಿ - 7,81,47,268 ರೂ.

ಕರ್ನಾಟಕ ಮುಕ್ತ ವಿವಿ - 2,03,12,228 ರೂ.

ಕಾಲೇಜು, ತಾಂತ್ರಿಕ ಶಿಕ್ಷಣ - 154,57,47,121 ರೂ.

ಈ ವರ್ಷ 45 ಕೋಟಿ ರೂ. ಬಾಕಿ ಬರಬೇಕಾಗಿದೆ: ಮೆಸೂರು ವಿವಿ

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್, ಬೋಧಕರು ಮತ್ತು ಬೋಧಕೇತರರು ಸೇರಿದಂತೆ ಪಿಂಚಣಿ ಪಡೆಯುವವರು 1,700 ಮಂದಿ ಇದ್ದು, ವರ್ಷಕ್ಕೆ 90 ಕೋಟಿ ರೂ.ಯನ್ನು ನೀಡಬೇಕಿದ್ದು ಈ ವರ್ಷ 45 ಕೋಟಿ ರೂ. ಬಾಕಿ ಸರಕಾರದಿಂದ ಬರಬೇಕಿದೆ. ನಿವೃತ್ತಿ ಹೊಂದಿದ ಮೈಸೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್, ಬೋಧಕರು ಮತ್ತು ಭೋಧಕೇತರ ಸಿಬ್ಬಂದಿಗೆ ಪಿಂಚಣಿ ವರ್ಷಕ್ಕೆ 90 ಕೋಟಿ ರೂ.ಯಷ್ಟು ನೀಡಬೇಕಿದೆ. ಆದರೆ ಕಳೆದ ಎರಡು ವರ್ಷಗಳಿಂದ ಸಮಯಕ್ಕೆ ಹಣಬಿಡುಗಡೆಯಾಗುತ್ತಿಲ್ಲ, ಆದ್ದರಿಂದ ಪಿಂಚಣಿದಾರರಿಗೆ ತೊಂದರೆಯಾಗಬಾರದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಇತರ ಅಕೌಂಟ್‌ನಲ್ಲಿರುವ ಹಣದಲ್ಲಿ ಅವರಿಗೆ ನೀಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದೀಚೆಗೆ ಈ ರೀತಿ ತೊಂದರೆಯಾಗುತ್ತಿದ್ದು, ಈ ಮೊದಲು ಇಂತಹ ಸಮಸ್ಯೆ ಆಗಿರಲಿಲ್ಲ.

ಪ್ರೊ.ಶಿವಪ್ಪ, ಮೈಸೂರು ವಿ.ವಿ.ರಿಜಿಸ್ಟ್ರಾರ್

ಕೋರಿಕೆ ಸಲ್ಲಿಸಿದ್ದೇವೆ: ಮಂಗಳೂರು ವಿವಿ

ಮಂಗಳೂರು ವಿಶ್ವವಿದ್ಯಾನಿಲಯದಿಂದಲೂ ಸ್ವಯಂ ನಿವೃತ್ತಿ ಹೊಂದಿರುವ ಅಧ್ಯಾಪಕರು ಮತ್ತು ಪ್ರಾಧ್ಯಾಪಕರಿಗೆ ಕುಟುಂಬ ಪಿಂಚಣಿ ಉಪದಾನಗಳ ಶೀರ್ಷಿಕೆಯಡಿ ಅನುದಾನ ಬಾಕಿ ಇದೆ. ಈ ಬಗ್ಗೆ ಸರಕಾರಕ್ಕೆ ಅನುದಾನ ಕೋರಿಕೆ ಸಲ್ಲಿಸಿದ್ದೇವೆ. ಆದರೆ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಪಿಂಚಣಿ ನೀಡಲು ಪೆನ್‌ಷನ್ ಫಂಡ್ ಮ್ಯಾನೇಜ್‌ಮೆಂಟ್ ನಿಧಿಯನ್ನು ಎಲ್‌ಐಸಿ ಜೊತೆ ಸೇರಿ ಮೊದಲೇ ಮಾಡಿಕೊಂಡಿದ್ದೇವೆ. ಅದರಿಂದ ಹಾಲಿ ನಿವೃತ್ತಿಯಾದವರಿಗೆ ಪಿಂಚಣಿ ಪಾವತಿ ಮಾಡಿದ್ದೇವೆ. ಆದರೆ ಸರಕಾರದಿಂದ ನಾವು ಕೋರಿಕೆ ಸಲ್ಲಿಸಿದ ಅನುದಾನ ಬಂದರೆ ನಮ್ಮ ಆಂತರಿಕ ಸಂಪನ್ಮೂಲ ಪಾವತಿಗೆ ಬಾಕಿ ಇರುವ ಮೊತ್ತವನ್ನು ಪಾವತಿಸಲು ಅನುಕೂಲವಾಗುತ್ತದೆ.

ಡಾ.ಪಿ.ಎಸ್.ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿವಿ

share
ಜಿ. ಮಹಾಂತೇಶ್
ಜಿ. ಮಹಾಂತೇಶ್
Next Story
X