"ರೈತರಿಗೆ ಇಂದು ಸೂರ್ಯೋದಯ": ಚಳಿಗಾಲದ ಅಧಿವೇಶನದ ಮೊದಲ ದಿನ ರಾಹುಲ್ ಗಾಂಧಿ ಟ್ವೀಟ್

ಹೊಸದಿಲ್ಲಿ: ಇಂದು ಆರಂಭವಾಗಲಿರುವ ಚಳಿಗಾಲದ ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದೊಂದಿಗೆ ಕೃಷಿ ಸಮಸ್ಯೆಗಳ ವಿಚಾರದಲ್ಲಿ ಸಂಘರ್ಷ ನಡೆಸಲು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಜ್ಜಾಗಿದ್ದಾರೆ. ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಪ್ರತಿಪಕ್ಷಗಳು ಸಂಸತ್ತಿನಲ್ಲಿ ರೈತರಿಗೆ ಸೂರ್ಯೋದಯವನ್ನು ಖಚಿತಪಡಿಸುತ್ತದೆ. ಇಂದು ಸಂಸತ್ತಿನಲ್ಲಿ ಅನ್ನದಾತ ಹೆಸರಿನ ಸೂರ್ಯ ಉದಯವಾಗಲಿದೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದರು.
ಕೃಷಿ ಕಾನೂನು ರದ್ದುಪಡಿಸುವ ಕೇಂದ್ರ ಸರಕಾರದ ಕ್ರಮ ಸ್ವಲ್ಪ ತಡವಾಗಿದೆ ಎಂದು ವಿರೋಧ ಪಕ್ಷಗಳು ಮತ್ತು ಕೆಲವು ರೈತ ಮುಖಂಡರು ಟೀಕಿಸಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಪ್ರಧಾನಿ ಮೋದಿಯವರು ಕೃಷಿ ಕಾನೂನುಗಳ ರದ್ದುಪಡಿಸಲು ಕಾರಣ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಉತ್ತರಪ್ರದೇಶದಲ್ಲೂ ಹೆಚ್ಚಿನ ಸಂಖ್ಯೆಯ ರೈತರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
आज संसद में अन्नदाता के नाम का सूरज उगाना है।#MSP #FarmLaws
— Rahul Gandhi (@RahulGandhi) November 29, 2021