ಬಿಟ್ಕಾಯಿನ್ ಅನ್ನು ಕರೆನ್ಸಿಯಾಗಿ ಪರಿಗಣಿಸುವ ಪ್ರಸ್ತಾಪವಿಲ್ಲ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್ (PTI)
ಹೊಸದಿಲ್ಲಿ: ದೇಶದಲ್ಲಿ ಬಿಟ್ಕಾಯಿನ್ ಅನ್ನು ಕರೆನ್ಸಿ ಆಗಿ ಪರಿಗಣಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ತಿಳಿಸಿದ್ದಾರೆ. ಬಿಟ್ಕಾಯಿನ್ ವ್ಯವಹಾರಗಳ ಕುರಿತ ದತ್ತಾಂಶವನ್ನೂ ಸರಕಾರ ಸಂಗ್ರಹಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಸರಕಾರವು ಸದ್ಯ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ಎಂಡ್ ರೆಗ್ಯುಲೇಶನ್ ಆಫ್ ಅಫಿಶಿಯಲ್ ಡಿಜಿಟಲ್ ಕರೆನ್ಸಿ ಬಿಲ್ 2021 ಅನ್ನು ಮಂಡಿಸಲಿದೆ.
Next Story