ಭಾರತ-ನ್ಯೂಝಿಲ್ಯಾಂಡ್ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ

Photo: Twitter/@BCCI
ಕಾನ್ಪುರ: ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವೆ ಇಲ್ಲಿ ನಡೆಯುತ್ತಿದ್ದ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದೆ.
ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ 284 ರನ್ ಗುರಿ ಬೆನ್ನಟ್ಟಿದ ನ್ಯೂಝಿಲ್ಯಾಂಡ್ ತಂಡ 5ನೇ ಹಾಗೂ ಕೊನೆಯ ದಿನವಾದ ಸೋಮವಾರ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಯಶಸ್ವಿಯಾಯಿತು.
ಭಾರತವು 2ನೇ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿ ಕಿವೀಸ್ ಪಡೆ ಗೆಲ್ಲಲು ಕಠಿಣ ಗುರಿ ನೀಡಿತು.
ಸ್ಪಿನ್ನರ್ ಗಳಾದ ಅಶ್ವಿನ್(3-35) ಹಾಗೂ ರವೀಂದ್ರ ಜಡೇಜ (4-40) ದಾಳಿಗೆ ತತ್ತರಿಸಿದ ಕಿವೀಸ್ ನಿರಂತರ ವಿಕೆಟ್ ಗಳನ್ನು ಕಳೆದುಕೊಂಡಿತು.
ನ್ಯೂಝಿಲ್ಯಾಂಡ್ ಪರ ಆರಂಭಿಕ ಆಟಗಾರ ಟಾಮ್ ಲಥಾಮ್(52) ಸರ್ವಾಧಿಕ ಸ್ಕೋರ್ ಗಳಿಸಿದರು. ವಿಲಿಯಮ್ ಸೊಮರ್ ವಿಲ್ಲೆ(36), ನಾಯಕ ಕೇನ್ ವಿಲಿಯಮ್ಸನ್(24)ಹಾಗೂ ರಚಿನ್ ರವೀಂದ್ರ(ಔಟಾಗದೆ 18) ಎರಡಂಕೆಯ ಸ್ಕೋರ್ ಗಳಿಸಿದರು.
Next Story