ಮಂಗಳೂರು ಪೊಲೀಸ್ ಶ್ವಾನದಳಕ್ಕೆ ಮತ್ತೋರ್ವ ಸದಸ್ಯೆ
![ಮಂಗಳೂರು ಪೊಲೀಸ್ ಶ್ವಾನದಳಕ್ಕೆ ಮತ್ತೋರ್ವ ಸದಸ್ಯೆ ಮಂಗಳೂರು ಪೊಲೀಸ್ ಶ್ವಾನದಳಕ್ಕೆ ಮತ್ತೋರ್ವ ಸದಸ್ಯೆ](https://www.varthabharati.in/sites/default/files/images/articles/2021/11/30/315820-1638282749.jpeg)
ಮಂಗಳೂರು, ನ.30: ಮಂಗಳೂರು ಪೊಲೀಸ್ ಕಮಿಷನರೇಟ್ ಶ್ವಾನದಳಕ್ಕೆ 45 ದಿನಗಳ ಪುಟ್ಟ ರೂಬಿ ಸೇರ್ಪಡೆಗೊಂಡಿದ್ದು, ಸೂಕ್ತ ತರಬೇತಿಯನ್ನು ಪೂರೈಸಿದ ಬಳಿಕ ಇದು ಪೊಲೀಸರ ಜತೆ ಅಪರಾಧ ಪ್ರಕರಣಗಳನ್ನು ಬೇಧಿಸುವಲ್ಲಿ ಸಾಥ್ ನೀಡಲಿದೆ.
ಡಾಬರ್ ಮನ್ ತಳಿಗೆ ಸೇರಿರುವ ರೂಬಿ ಬೆಂಗಳೂರಿನಲ್ಲಿ ತರಬೇತಿಯ ಬಳಿಕ ಮಂಗಳೂರು ಶ್ವಾನದಳದಲ್ಲಿ ಅಪರಾಧ ಪತ್ತೆ ಕಾರ್ಯದಲ್ಲಿ ಸಹಕರಿಸಲಿದೆ.
ಕಳೆದ ಸೆಪ್ಟೆಂಬರ್ನಲ್ಲಿ ಶ್ವಾನದಳಕ್ಕೆ ಸ್ಪೋಟಕಗಳ ಪತ್ತೆ ತರಬೇತಿ ಪಡೆದ ‘ರಾಣಿ’ ಹೆಸರಿನ ಶ್ವಾನವನ್ನು ಸೇರ್ಪಡೆಗೊಳಿಸ ಲಾಗಿತ್ತು. ಶ್ವಾನದಳದಲ್ಲಿ ‘ಗೀತಾ’ ಎಂಬ ಶ್ವಾನ ಕೂಡ ಸೇವೆ ಸಲ್ಲಿಸುತ್ತಿದೆ. ಇನ್ನೊಂದು ಶ್ವಾನ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದೆ
![](https://www.varthabharati.in/sites/default/files/images/galllery/2021/11/30/WhatsApp Image 2021-11-30 at 6.21.31 PM.jpeg)
Next Story