ಹೊಟೇಲ್ ವೈಟರ್‌ನ ಮೊಬೈಲ್ ಕಳವು
ಉಡುಪಿ, ನ.30: ವೈಟರ್‌ನ ಮೊಬೈಲ್ ಕಳವುಗೈದ ಆರೋಪಿ ಅದರಲ್ಲಿನ ಗೂಗಲ್ ಪೇ ಬಳಸಿ ಸಾವಿರಾರು ರೂ. ವ್ಯಯಿಸಿರುವ ಘಟನೆ ವರದಿಯಾಗಿದೆ.
ಉಡುಪಿ ನಗರದ ಹೊಟೇಲೊಂದರ ವೈಟರ್, ನಂದಳಿಕೆಯ ಪ್ರವೀಣ್ ಕೋಟ್ಯಾನ್ ಎಂಬವರ ಮೊಬೈಲ್‌ನ್ನು ಮಂಡ್ಯ ಮೂಲದ ರಾಘು ವೈ.ಎಸ್. (27) ಎಂಬಾತ ನ.26ರಂದು ಹೊಟೇಲಿನ ಸ್ಟಾಫ್ ರೂಮಿನಲ್ಲಿ ಕಳವು ಮಾಡಿರುವುದಾಗಿ ದೂರಲಾಗಿದೆ.
ಬಳಿಕ ಆತ ಮೊಬೈಲ್‌ನಲ್ಲಿದ್ದ ಗೂಗಲ್ ಪೇಯನ್ನು ಉಪಯೋಗಿಸಿ ಒಟ್ಟು 78,850ರೂ. ಖರ್ಚು ಮಾಡಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





