ಬೆಂಗಳೂರು; ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ: ಡಿ.6ಕ್ಕೆ ಕಲ್ನಾಡಿಗೆಯ ಜಾಥ
ಬೆಂಗಳೂರು, ನ.30: ಬ್ರಾಹ್ಮಣಶಾಹಿ ವಿರುದ್ದ ವೈಚಾರಿಕ ಹೋರಾಟವನ್ನು ಮಾಡಿದ ಮಹಾನಾಯಕ ಅಂಬೇಡ್ಕರ್‍ರ 65ನೇ ಪರಿನಿರ್ವಾಣದ ಅಂಗವಾಗಿ ಡಿ.7ರಂದು ಸ್ವಾಭಿಮಾನ ಸಂಕಲ್ಪದಿನವನ್ನಾಗಿ ಆಚರಣೆ ಮಾಡಲಾಗುವುದು. ಅಂದು ನಗರದ ಬನಪ್ಪ ಪಾರ್ಕ್‍ನಿಂದ ವಿಧಾನಸೌಧದವರೆಗೆ ಬೃಹತ್ ಕಾಲ್ನಡಿಗೆ ಜಾಥವನ್ನು ದಲಿತ ಸಂಘರ್ಷ ಸಮಿತಿ (ಸಮತಾವಾದ) ವತಿಯಿಂದ ಆಯೋಜಿಸಲಾಗಿದ್ದು, ಎಲ್ಲರೂ ಸಕ್ರಿಯವಾಗಿ ಭಾಗವಹಿಸುವಂತೆ ಸಮಿತಿಯ ರಾಜ್ಯಾಧ್ಯಕ್ಷ ಹೆಚ್. ಮಾರಪ್ಪ ಕರೆಕೊಟ್ಟಿದ್ದಾರೆ.
ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ತಲೆಮಾರುಗಳಿಂದ ನಡೆಯುತ್ತಿದ್ದ ದಲಿತ ಸಮುದಾಯಗಳ ಮೇಲಿನ ಸವರ್ಣೀಯರ ದೌರ್ಜನ್ಯವನ್ನು ಖಂಡಿಸಿದ್ದಲ್ಲದೇ, ಸಮಸಮಾಜದ ಕನವರಿಕೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಅಂಬೇಡ್ಕರ್‍ರು ಡಿ.6ರಂದು ಪರಿನಿರ್ವಾಣ ಹೊಂದಿದರು. ಆದುದರಿಂದ ಡಿ.6ರಂದು ದೇಶಾದ್ಯಂತ ಶೋಕಾಚರಣೆ ಮಾಡಲಾಗುತ್ತದೆ. ಅದರ ಅಂಗವಾಗಿ ಅಂದು ಜಾಥವನ್ನು ಆಯೋಜಿಸಲಾಗಿದೆ ಎಂದರು.
ನನ್ನ ಸಾವು ಹತ್ತಿರ ಬರುತ್ತಿದೆ. ನನ್ನ ಜನರಿಗೆ ಹೇಳು ನನ್ನ ಹೋರಾಟವನ್ನು ಮುನ್ನಡಿಸಿಕೊಡು ಹೋಗಬೇಕೆಂದು ಅವರು ಸಾಯುವ ಮುನ್ನ ಹೇಳಿದ ಮಾತುಗಳು ಹೋರಾಟಗಾರರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚುತ್ತವೆ. ಆದುದರಿಂದ ಅಂದು ಸ್ವಾಭಿಮಾನ ಸಂಕಲ್ಪ ದಿನಾವಾಗಿ ಆಚರಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಎಲ್.ಎಂ.ಮುನಿಬೈರಪ್ಪ, ಬೇಗೂರು, ಟಿ.ಚಂದ್ರಪ್ಪ, ಎಸ್. ರಮೇಶ್, ವೆಂಕಟಾಚಲಪತಿ ಉಪಸ್ಥಿತರಿದ್ದರು.





