ವಜ್ರ, ಚಿನ್ನಾಭರಣ ದೋಚಿ ಪರಾರಿಯಾದ ಉದ್ಯೋಗಿ : ದೂರು ದಾಖಲು
ಕಾಸರಗೋಡು; ಸುಲ್ತಾನ್ ಜುವೆಲ್ಲರಿಗೆ ವಂಚನೆ

ಕಾಸರಗೋಡು: ಇಲ್ಲಿನ ಸುಲ್ತಾನ್ ಜುವೆಲ್ಲರಿಗೆ ಕೋಟ್ಯಾಂತರ ರೂ. ಮೌಲ್ಯದ ವಜ್ರ, ಚಿನ್ನಾಭರಣ ವಂಚನೆ ನಡೆದಿರುವುದಾಗಿ ದೂರಲಾಗಿದೆ.
ಸುಲ್ತಾನ್ ಜುವೆಲ್ಲರಿ ಉದ್ಯೋಗಿ ಚಿನ್ನಾಭರಣ ದೋಚಿ ಪರಾರಿಯಾಗಿರುವುದಾಗಿ ಹಿರಿಯ ಉದ್ಯೋಗಿಯೋರ್ವರು ಕಾಸರಗೋಡು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಗಳೂರು – ಬಿಸಿ ರೋಡ್ ನಿವಾಸಿ ಮುಹಮ್ಮದ್ ಫಾರೂಕ್ ಎಂಬಾತ ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಸುಮಾರು ಒಂದೂವರೆ ವರ್ಷದಲ್ಲಿ ನೌಕರನೋರ್ವ ಜುವೆಲ್ಲರಿಯಲ್ಲಿದ್ದ ಸುಮಾರು 2.5 ಕೋಟಿ ರೂ. ಮೌಲ್ಯದ ವಜ್ರ, ಚಿನ್ನಾಭರಣ ದೋಚಿದ್ದಾನೆ. ಜುವೆಲ್ಲರಿ ಲೆಕ್ಕ ಪರಿಶೋಧನೆ ಮಾಡಿದ ಸಂದರ್ಭ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎಂದು ಹಿರಿಯ ಉದ್ಯೋಗಿಯೊಬ್ಬರು ದೂರಿದ್ದಾರೆ.
Next Story





