Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಮನುಕುಲದ ಮಹಾಮಾರಿ ಏಡ್ಸ್

ಮನುಕುಲದ ಮಹಾಮಾರಿ ಏಡ್ಸ್

ಇಂದು ವಿಶ್ವ ಏಡ್ಸ್ ಜಾಗೃತಿ ದಿನ

ಡಾ. ಮುರಲೀ ಮೋಹನ್ ಚೂಂತಾರುಡಾ. ಮುರಲೀ ಮೋಹನ್ ಚೂಂತಾರು1 Dec 2021 1:02 PM IST
share
ಮನುಕುಲದ ಮಹಾಮಾರಿ ಏಡ್ಸ್

ಏಡ್ಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಏಡ್ಸ್ ರೋಗದ ಬಗ್ಗೆ ಇರುವ ತಪ್ಪುಕಲ್ಪನೆಗಳು ಹೋಗಲಾಡಿಸುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ಜಾಗೃತಿ ದಿನ ಎಂದು ಆಚರಿಸಲಾಗುತ್ತಿದೆ. 1988ರಿಂದ ಈ ಆಚರಣೆ ಜಾರಿಗೆ ಬಂದಿತು. ಬೀದಿ ನಾಟಕಗಳು, ಜಾಗೃತಿ ಜಾಥಾಗಳು, ವಿಚಾರ ಸಂಕೀಕರಣಗಳು, ಸಂವಾದಗಳು, ಏಡ್ಸ್ ತಿಳುವಳಿಕಾ ಶಿಬಿರಗಳು ಮುಂತಾದ ಕಾರ್ಯಕ್ರಮ ನಡೆಸಿ ಜನರಲ್ಲಿ ಏಡ್ಸ್ ಬಗ್ಗೆ ಇರುವ ಅಪನಂಬಿಕೆಗಳನ್ನು ತೊಡೆದು ಹಾಕಿ, ಎಚ್‌ಐವಿ ವೈರಾಣುವಿನಿಂದ ಸೋಂಕಿತರಾದವರೂ ಇತರರಂತೆ ಸಾಮಾನ್ಯ ಜೀವನ ನಡೆಸಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿ ಹೇಳುವ ಕೆಲಸವನ್ನು ಈ ದಿನ ಹೆಚ್ಚು ಮುತುವರ್ಜಿಯಿಂದ ನಡೆಸಲಾಗುತ್ತದೆ. ಮಾರಾಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನ ಒಳಗೆ ಬರುವ ಏಡ್ಸ್ ರೋಗ ಮನುಕುಲವನ್ನು ಮಾಹಾ ಮಾರಿಯಂತೆ ಕಾಡುತ್ತದೆ. ಕಟ್ಟು ನಿಟ್ಟಿನ ಆಹಾರ ಪದ್ಧತಿ, ನಿರಂತರ ಆಪ್ತಸಮಾಲೋಚನೆ, ಜೀವನ ಶೈಲಿ ಮಾರ್ಪಾಡು ಮತ್ತು ನಿರಂತರ ಔಷಧಿಗಳಿಂದ ಎಚ್‌ಐವಿ ಸೋಂಕಿತರೂ ಸಹಜ ಜೀವನ ನಡೆಸಬಹುದು ಎಂದು ಸಮಾಜಕ್ಕೆ ತಿಳಿ ಹೇಳಬೇಕಾದ ಅನಿವಾರ್ಯತೆ ಇದೆ. ಸಮಾಜ ಇಂತಹ ರೋಗಿಗಳನ್ನು ನೋಡುವ ದೃಷ್ಟಿ ಬದಲಾಗಬೇಕು ಹಾಗಾದಲ್ಲಿ ಮಾತ್ರ ಏಡ್ಸ್ ದಿನಾಚರಣೆಗೆ ಹೆಚ್ಚಿನ ಮೌಲ್ಯ ಬಂದಿತು.

ಏನಿದು ಏಡ್ಸ್ ?

ಏಡ್ಸ್ ಎನ್ನುವುದು ಎಚ್‌ಐವಿ ಎಂಬ ವೈರಾಣುವಿನ ಸೋಂಕಿನಿಂದ ಉಂಟಾಗುವ ರೋಗ ಲಕ್ಷಣಗಳ ಗುಚ್ಚವಾಗಿರುತ್ತದೆ. ಎಚ್‌ಐವಿ ಎಂದರೆ ಹ್ಯೂಮನ್ ಇಮ್ಯೂನೋ ಡೆಫಿಷಿಯನ್‌ಸ್ಸಿ ವೈರಸ್ ಆಗಿರುತ್ತದೆ. ಈ ಎಚ್‌ಐವಿ ವೈರಾಣುವಿನಿಂದ ಸೋಂಕು ಹೊಂದಿದ ವ್ಯಕ್ತಿಗಳೆಲ್ಲಾ ಏಡ್ಸ್ ರೋಗದಿಂದ ಬಳಲಬೇಕೇಂದಿಲ್ಲ. ಆದರೆ ಏಡ್ಸ್ ಇರುವವರೆಲ್ಲಾ ಎಚ್‌ಐವಿ ವೈರಾಣುವಿನಿಂದ ಸೋಂಕಿತರಾಗಿರುತ್ತಾರೆ. ಏಡ್ಸ್ ಎನ್ನುವುದು ತಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಸಂಬಂಧಪಟ್ಟ ಕಾಯಿಲೆಯಾಗಿರುತ್ತದೆ. ಎಚ್‌ಐವಿ ವೈರಾಣು ದೇಹಕ್ಕೆ ಸೇರಿದ ಬಳಿಕ ನಮ್ಮ ದೇಹದ ರಕ್ಷಣಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬಿಳಿರಕ್ತಕಣಗಳ ಮೇಲೆ ದಾಳಿ ಮಾಡುತ್ತದೆ. ಹೀಗಾದಾಗ ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಹೋಗಿ, ರೋಗಿಯು ಬ್ಯಾಕ್ಟೀರಿಯಾ, ಫಂಗಸ್, ವೈರಾಣು ಅಥವಾ ಇನ್ನಾವುದೇ ರೋಗಗಳ ಸೋಂಕಿಗೆ ಬೇಗನೆ ತುತ್ತಾಗುತ್ತಾನೆ. ಒಟ್ಟಿನಲ್ಲಿ ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟು ಹೋಗಿ ರೋಗಿಗಳಲ್ಲಿ ಕಂಡುಬರುವ ರೋಗಗಳ ಸಮೂಹಕ್ಕೆ ಒಟ್ಟಾಗಿ ಏಡ್ಸ್ ರೋಗ ಎಂದು ಸಂಭೋಧಿಸಲಾಗುತ್ತದೆ. ಪದೇ ಪದೇ ಕಾಡುವ ಜ್ವರ, ತಲೆ ನೋವು, ನಿರಂತರ ಬೇಧಿ, ವಿಪರೀತ ಸುಸ್ತು, ಅಪೌಷ್ಟಿಕತೆ, ಗಂಟಲು ಉರಿ, ಗಂಟಲು ನೋವು, ಕೆಮ್ಮು ದಮ್ಮು, ದೇಹದ ತೂಕ ಕಡಿಮೆಯಾಗುವುದು, ಕುತ್ತಿಗೆಯ ಸುತ್ತ ಗಡ್ಡೆ ಬೆಳೆಯುವುದು ಹೀಗೆ ಹತ್ತು ಹಲವು ತೊಂದರೆಗಳು ಒಟ್ಟಾಗಿ ಕಾಡಿ ವ್ಯಕ್ತಿಯನ್ನು ಹಿಂಡಿ ಹಿಪ್ಪೆಮಾಡಿ ಆತನನ್ನು ರೋಗಗಳ ಹಂದರವನ್ನಾಗಿ ಮಾಡಿ, ರಸ ಹೀರಿದ ಕಬ್ಬಿನ ಜಲ್ಲೆಯಂತೆ ವ್ಯಕ್ತಿಯನ್ನು ಹೈರಾಣಾಗಿಸಿಬಿಡುತ್ತದೆ.

ಬಾಯಿಯಲ್ಲಿ ಕಂಡು ಬರುವ ಎಚ್‌ಐವಿ ಸೋಂಕಿನ ಚಿಹ್ನೆಗಳು:

ಬಾಯಿಯನ್ನು ಸಾಮಾನ್ಯವಾಗಿ ವೈದ್ಯರ ಮುಖ ಕನ್ನಡಿ ಎಂದು ಸಂಬೋಧಿಸುತ್ತಾರೆ. ಯಾಕೆಂದರೆ ನೂರಾರು ರೋಗಗಳ ಚಿಹ್ನೆಗಳು ಆರಂಭಿಕ ಹಂತದಲ್ಲಿಯೇ ಬಾಯಿಯೊಳಗೆ ಕಾಣಿಸುತ್ತದೆ. ಎಚ್‌ಐವಿ ಸೋಂಕು ತಗುಲಿದ ಬಳಿಕ ದೇಹದ ರಕ್ಷಣ ವ್ಯವಸ್ಥೆ ಕುಸಿದು ಹೋಗಿ ಬಾಯಿಯಲ್ಲಿ ಹಲವಾರು ಸಮಸ್ಯೆಗಳು ಕಂಡು ಬರುತ್ತದೆ. ಇವುಗಳಲ್ಲಿ ಈ ಕೆಳಗಿನವು ಪ್ರಮುಖವಾಗಿದೆ.

► ಓರಲ್ ವಾರ್ಟ್‌ಗಳು:

ಇದನ್ನು ಅಚ್ಚ ಕನ್ನಡದಲ್ಲಿ ನಾರೋಲಿ ಅಥವಾ ಆಣಿ ಅಂತಲೂ ಸಂಬೋಧಿಸಲಾಗುತ್ತದೆ. ಸಣ್ಣ ಸಣ್ಣ ನೋವು ರಹಿತ ಗಡ್ಡೆಗಳು ಅಥವಾ ಗಂಟುಗಳು ಬಾಯಿಯೊಳಗೆ ಕಂಡು ಬರುತ್ತದೆ. ಇವುಗಳ ಸಂಖ್ಯೆ ನಾಲ್ಕ್ಕರಿಂದ ಹತ್ತಿಪ್ಪತ್ತರವರೆಗೆ ಇರುತ್ತದೆ. ಹ್ಯೂಮನ್ ಪಾಪಿಲೋಮಾ ಎಂಬ ವೈರಾಣುವಿನಿಂದ ಈ ವಾರ್ಟ್‌ಗಳು ಉಂಟಾಗುತ್ತದೆ. ಲೇಸರ್ ಮುಖಾಂತರ ಈ ವಾರ್ಟ್‌ಗಳನ್ನು ಕಿತ್ತುಹಾಕಲಾಗುತ್ತದೆ. ಆದರೆ ಪದೇ ಪದೇ ಅವುಗಳು ಮರುಕಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

► ಕೂದಲುಗಳುಳ್ಳ ಲ್ಯೂಕೋಪ್ಲೇಕಿಯಾ:

ಇದೊಂದು ಬೆಳ್ಳಗಿನ ದಪ್ಪನಾದ ಪದರವಾಗಿದ್ದು ನಾಲಗೆ ಮೇಲೆ ಹೆಚ್ಚಾಗಿ ಕಂಡು ಬರುತ್ತದೆ. ಅವುಗಳ ನಡುವೆ ಸಣ್ಣ ಕೂದಲುಗಳಂತಹ ರಚನೆ ಕಂಡು ಬರುತ್ತದೆ. ಇವುಗಳನ್ನು ಟೂತ್‌ಬ್ರಶ್‌ನಿಂದ ತೆಗೆಯಲು ಸಾಧ್ಯವಾಗದು ಮತ್ತು ನೋವು ಇರುವ ಸಾಧ್ಯತೆ ಇರುತ್ತದೆ. ನಾಲಿಗೆಯಲ್ಲಿ ರುಚಿಯನ್ನು ಕಂಡು ಹಿಡಿಯುವ ಸಾಮರ್ಥ್ಯ ಕ್ಷೀಣಿಸುತ್ತದೆ. ಏಬ್‌ಸ್ಟೈನ್ ಬಾರ್ ವೈರಾಣುವಿನಿಂದ ಈ ಸ್ಥಿತಿ ಬರುತ್ತದೆ. ನೂರರಲ್ಲಿ 90 ಶೇಕಡಾ ಏಡ್ಸ್ ರೋಗಿಗಳಲ್ಲಿ ಇದು ಕಾಣಿಸುತ್ತದೆ.

► ಓರಲ್ ಥ್ರಷ್ :

ಇದೊಂದು ಶಿಲೀಂದ್ರ ಅಥವಾ ಫಂಗಸ್ ಸೋಂಕಿನಿಂದ ಬರುವ ರೋಗವಾಗಿರುತ್ತದೆ. ಬಾಯಿಯೊಳಗಿನ ಕೆನ್ನೆಯ ಒಳಭಾಗ ಮತ್ತು ನಾಲಗೆಯ ಮೇಲೆ ಬಿಳಿಯದಾದ ದಪ್ಪ ಪದರ ಉಂಟಾಗುತ್ತದೆ. ಇದನ್ನು ಸುಲಭವಾಗಿ ತೆಗೆಯಬಹುದು. ಆದರೆ ಬಹಳ ನೋವು ಇರುತ್ತದೆ ಮತ್ತು ರಕ್ತಸ್ರಾವವಾಗುವ ಸಾಧ್ಯತೆಯೂ ಇರುತ್ತದೆ. ಕ್ಯಾಂಡಿಡಾ ಎಂಬ ಫಂಗಸ್‌ನಿಂದ ಈ ಥ್ರಷ್ ಬರುತ್ತದೆ. ಇದನ್ನು ಕ್ಯಾಂಡಿಡಿಯೋಸಿಸ್ ಎಂತಲೂ ಕರೆಯುತ್ತಾರೆ. ಈ ಕ್ಯಾಂಡಿಡಾ ಎಂಬ ಫಂಗಸ್ ಎಲ್ಲ ಆರೋಗ್ಯವಂತ ವ್ಯಕ್ತಿಗಳ ಬಾಯಿಯಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಯಾವುದೇ ತೊಂದರೆ ಉಂಟುಮಾಡುವುದಿಲ್ಲ. ಆದರೆ ದೇಹದ ರಕ್ಷಣ ವ್ಯವಸ್ಥೆ ಕುಸಿದಾಗ ಏಡ್ಸ್ ಮುಂತಾದ ಖಾಯಿಲೆಗಳಲ್ಲಿ ಹೆಚ್‌ಐವಿ ಸೋಂಕು ತಗುಲಿದವರಲ್ಲಿ, ಮಧುಮೇಹ ರೋಗಿಗಳಲ್ಲಿ, ಅತಿಯಾದ ಸ್ಟಿರಾಯ್ಡಿ ಬಳಸಿದಾಗ ಅಥವಾ ಅತಿ ಹೆಚ್ಚು ದಿನಗಳ ಕಾಲ ಆ್ಯಂಟಿಬಯೋಟಿಕ್ ಬಳಸಿದಾಗ ಈ ರೀತಿಯ ಓರಲ್ ಥ್ರಷ್ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಆ್ಯಂಟಿ ಫಂಗಲ್ ಔಷಧಿ ಮತ್ತು ಲೋಷನ್ ಬಳಸಿ ಈ ರೋಗವನ್ನು ನಿಯಂತ್ರಿಸಲಾಗುತ್ತದೆ.

ಪದೇ ಪದೇ ಕಾಡುವ ಬಾಯಿ ಹುಣ್ಣು:

ಎಚ್‌ಎಚ್‌ಐವಿ ಸೋಂಕು ಇರುವವರಲ್ಲಿ ಬಾಯಿಯಲ್ಲಿ ಪದೇ ಪದೇ ಹುಣ್ಣು ಉಂಟಾಗುತ್ತದೆ. ಕೆನ್ನೆಯ ಒಳಭಾಗ, ತುಟಿಯ ಒಳಭಾಗ, ನಾಲಗೆ, ವಸಡುಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಹರ್ಪಿಸ್ ಸಿಂಪ್ಲೆಕ್ಸ್ ಎಂಬ ವೈರಾಣುವಿನ ಸೋಂಕಿನಿಂದ ಈ ಬಾಯಿಹುಣ್ಣು ಬರುತ್ತದೆ. ಓವಲ್ ಆಕೃತಿಯಲ್ಲಿ ಅಥವಾ ದುಂಡಗಿನ ಆಕಾರದಲ್ಲಿ ಇರುವ ಈ ಹುಣ್ಣುಗಳ ಮಧ್ಯೆ ಬೆಳ್ಳಗಿರುತ್ತದೆ ಮತ್ತು ಸುತ್ತಲೂ ಕೆಂಪು ಪದರವಿರುತ್ತದೆ. ಬಿಸಿಯಾದ, ಖಾರದ ಆಹಾರ ತೆಗೆದುಕಕೊಂಡಾಗ ವಿಪರೀತ ನೋವು, ಯಾತನೆ, ಉರಿತ ಉಂಟಾಗುತ್ತದೆ. ಸ್ಟಿರಾಯ್ಡಿ ಔಷಧಿ ಬಳಸಿ ಇದನ್ನು ಗುಣಪಡಿಸಲಾಗುತ್ತದೆ.

5. ವಸಡಿನ ತೊಂದರೆಗಳು: ಎಚ್‌ಐವಿ ಸೋಂಕು ಇರುವವರಲ್ಲಿ ವಸಡಿನ ಉರಿಯೂತ, ಕೀವು, ರಕ್ತಸ್ರಾವ, ಹಲ್ಲು ಅಲುಗಾಡುವುದು, ಬಾಯಿ ವಾಸನೆ ಹೆಚ್ಚು ಕಂಡು ಬರುತ್ತದೆ. ನಿರಂತರವಾಗಿ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅವಶ್ಯವಾಗಿರುತ್ತದೆ.

► ಮೇಲೆ ತಿಳಿಸಿದ ಲಕ್ಷಣಗಳ ಜೊತೆಗೆ ಬಾಯಿ ಒಣಗುವುದು, ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು, ಜೋಲ್ಲುರಸ ಗ್ರಂಥಿಗಳು ಊದಿಕೊಳ್ಳುವುದು, ಹರ್ಪಿಸ್ ಜೋಸ್ಟರ್ ಎಂಬ ವೈರಾಣು ಸೋಂಕು, ಕಪೋಸೀಸ್ ಸಾರ್ಕೊಮಾ ಎಂಬ ರೋಗವೂ ಕಂಡು ಬರುತ್ತದೆ. ಜೊಲ್ಲುರಸದ ಉತ್ಪಾದನೆ ಕಡಿಮೆಯಾಗುವುದರಿಂದ ದಂತಕ್ಷಯ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಹೇಗೆ ಹರಡುತ್ತದೆ?

► ಎಚ್‌ಐವಿ ಸೋಂಕು ಇರುವ ವ್ಯಕ್ತಿಯ ಜೊತೆಗೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುತ್ತದೆ.

► ಎಚ್‌ಐವಿ ಸೊಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯ ಸಮಯದಲ್ಲಿ ಹೆರಿಗೆಯ ಸಮಯದಲ್ಲಿ ಮತ್ತು ಎದೆಹಾಲಿನ ಮುಖಾಂತರ ಹರಡುತ್ತದೆ.

► ಅಸ್ವಾಭಾವಿಕ ಲೈಂಗಿನ ಕ್ರಿಯೆಗಳಾದ ಬಾಯಿಯಿಂದ ಮತ್ತು ಗುದದ್ವಾರದ ಸೆಕ್ಸ್‌ಗಳಿಂದಲೂ ಹರಡುತ್ತದೆ.

► ಎಚ್‌ಐವಿ ಸೋಂಕು ಇರುವ ವ್ಯಕ್ತಿ ಬಳಸಿದ ಸೂಜಿ ಅದೇ ಸಿರಿಂಜ್‌ಗಳನ್ನು ಬೇರೆಯವರಿಗೆ ಬಳಸುವುದರಿಂದ ಹರಡುತ್ತದೆ.

► ಮಾದಕ ದ್ರವ್ಯ ವ್ಯಸನಿಗಳು ಬಳಸಿದ ಎಚ್‌ಐವಿ ಸೊಂಕಿತ ಸಿರಿಂಜ್‌ನ್ನು ಇನ್ನೊಬ್ಬರು ಬಳಸುವುದರಿಂದ ಹರಡುತ್ತದೆ.

► ದೇಹದಲ್ಲಿ ಹಚ್ಚೆ ಅಥವಾ ಟ್ಯಾಟೂ ಹಾಕಿಸಿಕೊಳ್ಳುವಾಗ ಎಚ್‌ಐವಿ ಸೋಂಕು ಇರುವವರಿಗೆ ಬಳಸಿದ ಸೂಜಿಗಳನ್ನು ಮಗದೊಮ್ಮೆ ಬಳಸುವುದರಿಂದ ಹರಡುತ್ತದೆ.

ಹೇಗೆ ಹರಡದು

► ಬೆವರು, ಎಂಜಲು, ಸಿಂಬಳ, ಕಣ್ಣೀರು, ಮಲ, ಮೂತ್ರ ಮುಂತಾದವುಗಳನ್ನು ಮುಟ್ಟುವುದರಿಂದ ಹರಡುವುದಿಲ್ಲ.

► ಊಟ, ತಟ್ಟೆ, ಬಟ್ಟೆ, ನೀರು ಮುಂತಾದವುಗಳನ್ನು ಹಂಚಿಕೊಳ್ಳುವುದರಿಂದ ಹರಡುವುದಿಲ್ಲ.

► ಸೊಳ್ಳೆಗಳ ಕಡಿತದಿಂದ ಎಚ್‌ಐವಿ ಹರಡುವುದಿಲ್ಲ

► ಕೈ ಕುಲುಕುವುದು, ಸೀನುವುದು, ಕೆಮ್ಮುವುದು ಇತ್ಯಾದಿಗಳಿಂದಲೂ ಹರಡುವುದಿಲ್ಲ.

share
ಡಾ. ಮುರಲೀ ಮೋಹನ್ ಚೂಂತಾರು
ಡಾ. ಮುರಲೀ ಮೋಹನ್ ಚೂಂತಾರು
Next Story
X