ಮೀನುಗಾರರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ: ಕೆ.ಶಂಕರ್ ಆರೋಪ
ಮೀನುಗಾರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಧರಣಿ

ಉಡುಪಿ, ಡಿ.1: ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ಮೀನು ಗಾರರು ಕೆಲಸ ಮತ್ತು ಆದಾಯ ಇಲ್ಲದೆ ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಮೀನುಗಾರರ ಯಾವುದೇ ಸಮಸ್ಯೆಗೂ ಸರಕಾರ ಸ್ಪಂದಿಸುತ್ತಿಲ್ಲ. ದುಡಿಯುವ ಜನರ ಬಗ್ಗೆ ಸರಕಾರಕ್ಕೆ ಯಾವುದೇ ಕಾಳಜಿ ಇಲ್ಲ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಶಂಕರ್ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿ ಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಕೇಂದ್ರ ಸರಕಾರ ಮೀನುಗಾರಿಕಾ ಉದ್ಯಮಕ್ಕೆ ಇರುವ ಆರ್ಥಿಕ ಪಾಲು ಹಂಚಿಕೆ ಹೆಚ್ಚಿಸಬೇಕು. ಮೀನುಗಾರರು ಮತ್ತು ಮೀನುಗಾರಿಕಾ ಕಾರ್ಮಿಕರಿಗೆ ಕೆಲಸದ ನಿಯಮಾವಳಿ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತಾ ಸವಲತ್ತು ಗಳನ್ನು ಒದಗಿಸಲು ಕಾಯಿದೆಯನ್ನು ರೂಪಿಸಬೇಕು. ವಿದೇಶಿ ಮೀನುಗಾರಿಕಾ ಹಡಗುಗಳ ವಿರುದ್ಧ ಮುರಾರಿ ಆಯೋಗದ ತೀರ್ಪನ್ನು ಜಾರಿಗೊಳಿಸಬೇಕು. ಅಪಘಾತದಲ್ಲಿ ಮರಣ ಹೊಂದಿದ್ದಲ್ಲಿ 10ಲಕ್ಷ ರೂ. ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಭಾರತೀಯ ಸಮುದ್ರದಲ್ಲಿ ವಿದೇಶಿ ಮೀನುಗಾರಿಕೆಯನ್ನು ನಿಷೇಧಿಸಬೇಕು. ಸಿಆರ್‌ಝೆಡ್ ಹೆಸರಿನಲ್ಲಿ ಸಮುದ್ರ ತೀರದಲ್ಲಿ ವಾಸ ಮಾಡುವವರಿಗೆ ಆಗುವ ತೊಂದರೆಗಳನ್ನು ನಿವಾರಿಸಬೇಕು. ಮೀನುಗಾರರು ಮತ್ತು ಮೀನುಗಾರಿಕಾ ಕಾರ್ಮಿಕರಿಗೆ ರೇಷನ್ ಕಾರ್ಡ್ ನೀಡಬೇಕು. ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ಸಮರ್ಪಕವಾಗಿ ಕಾಲಕಾಲಕ್ಕೆ ವಿತರಿಸಬೇಕು. ಮನೆ ನಿವೇಶನ ಹಂಚಲು ತುರ್ತು ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಬಳಿಕ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ಸಂಘದ ಕಾರ್ಯದರ್ಶಿ ಕವಿರಾಜ್, ಮುಖಂಡರಾದ ವೆಂಕಟೇಶ್ ಕೋಣಿ, ಉಮೇಶ್ ಕುಂದರ್, ನಳಿನಿ, ವಸಂತ, ಅನ್ವರ್, ಮಹೇಶ್ ಪೂಜಾರಿ, ಇಲಿಯಾಸ್, ಇಸ್ಮಾಯಿಲ್, ಶೇಖರ್ ಮರಕಲ ಮೊದಲಾದವರು ಉಪಸ್ಥಿತರಿದ್ದು.
ಕಲ್ಯಾಣ ಮಂಡಳಿ ರಚನೆಗೆ ಆಗ್ರಹ
ಮೀನುಗಾರರಿಗೆ ಮತ್ತು ಮೀನು ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಭಾಗವಾಗಿ ಕಲ್ಯಾಣ ಮಂಡಳಿಯೊಂದನ್ನು ರಾಜ್ಯದಲ್ಲಿ ರಚಿಸಬೇಕು. ಈ ಮೂಲಕ ಅಪಘಾತ ಸಂಭವಿಸಿದಲ್ಲಿ ಪರಿಹಾರ, ವಸತಿ, ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಹೆಣ್ಣು ಮಕ್ಕಳ ಮದುವೆಗೆ ಸಹಾಯಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಬೇಕುಎಂದು ಕೆ.ಶಂಕರ್ ಒತ್ತಾಯಿಸಿದರು.
ಕರಾವಳಿಯ ಉದ್ದಕ್ಕೂ ಕೇರಳ ಮಾದರಿಯಂತೆ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಿ ಮಳೆಗಾಲದಲ್ಲಿ ಆಗುವ ಅನಾಹುತಗಳನ್ನು ತಡೆಗಟ್ಟಬೇಕು. 60ವರ್ಷ ಪ್ರಾಯದ ನಂತರ ತಿಂಗಳಿಗೆ 6000ರೂ. ಪಿಂಚಣಿ ನೀಡೇಕು ಎಂದು ಅವರು ಆಗ್ರಹಿಸಿದರು.
ಕರಾವಳಿಯ ಉದ್ದಕ್ಕೂ ಕೇರಳ ಮಾದರಿಯಂತೆ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಿ ಮಳೆಗಾಲದಲ್ಲಿ ಆಗುವ ಅನಾಹುತಗಳನ್ನು ತಡೆಗಟ್ಟಬೇಕು. 60ವರ್ಷ ಪ್ರಾಯದ ನಂತರ ತಿಂಗಳಿಗೆ 6000ರೂ. ಪಿಂಚಣಿ ನೀಡಬೇಕು ಎಂದು ಅವರು ಆಗ್ರಹಿಸಿದರು.








