ಮಂಗಳೂರು: 'ಸಿಟಿ ಗೋಲ್ಡ್ ಶಾಪಿಂಗ್ ಫೆಸ್ಟಿವಲ್'ನ ಲಕ್ಕಿ ಡ್ರಾ

ಮಂಗಳೂರು, ಡಿ.1: ನಗರದ ಕಂಕನಾಡಿಯ ಬೈಪಾಸ್ ರಸ್ತೆಯಲ್ಲಿರುವ 'ಸಿಟಿ ಗೋಲ್ಡ್'ನಲ್ಲಿ ನಡೆಯುತ್ತಿರುವ 'ಶಾಪಿಂಗ್ ಫೆಸ್ಟಿವಲ್'ನ ವಾರದ ಲಕ್ಕಿ ಡ್ರಾ ಬುಧವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಗರದ ಫಳ್ನೀರ್ ನ ಸಫಿಯಾ ಮುಹಮ್ಮದ್ ಅದೃಷ್ಟದ ಚೀಟಿ ಎತ್ತಿದರು. ಬಜಾಲ್ ಪಡೀಲ್‌ನ ಪುಷ್ಪಾ ಅವರು ಲಕ್ಕಿ ಡ್ರಾ ವಿಜೇತರಾದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಿಗಳಾದ ರೋಶನಾರ್ ಎನ್ ಮತ್ತು ಅಫ್ರಾ ರೆಹ್ಮಾನ್ ಶುಭ ಹಾರೈಸಿದರು.
ಈ ಸಂದರ್ಭ ಸಿಟಿ ಗೋಲ್ಡ್‌ನ ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ., ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು, ಪುತ್ತೂರು, ಕಾಸರಗೋಡಿನಲ್ಲಿರುವ ಸಿಟಿ ಗೋಲ್ಡ್‌ನಲ್ಲಿ ಶಾಪಿಂಗ್ ಫೆಸ್ಟಿವಲ್‌ಗೆ ನವೆಂಬರ್ 19ರಂದು ಚಾಲನೆ ನೀಡಲಾಗಿತ್ತು. 2022ರ ಮಾರ್ಚ್‌ವರೆಗೆ ನಡೆಯುವ ಈ ಫೆಸ್ಟಿವಲ್ ಸಂದರ್ಭ ವಿಶೇಷ ಕೊಡುಗೆಯನ್ನೂ ಘೋಷಿಸಲಾಗಿದೆ. ಈ ಮಹಾಮೇಳದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಚಿನ್ನಾಭರಣಗಳ ಸಂಗ್ರಹವಲ್ಲದೆ ದೇಶ ವಿದೇಶದ ಆಧುನಿಕ ಹಾಗೂ ಸಾಂಪ್ರಾಯಿಕ ಚಿನ್ನಾಭರಣ ವಿನ್ಯಾಸ ಲಭ್ಯವಿದೆ. ಅಭೂತಪೂರ್ವ ನೆಕ್ಲೆಸ್, ಬಳೆಗಳು, ಕಿವಿಯೋಲೆ ಮತ್ತು ಉಂಗುರಗಳನ್ನು ಒಳಗೊಂಡಿದೆ. ಫೆಸ್ಟಿವಲ್ ಸಂದರ್ಭ ತಯಾರಿಕಾ ವೆಚ್ಚದಲ್ಲಿ ವಿಶೇಷ ಕೊಡುಗೆಯೊಂದಿಗೆ ಪ್ರತಿ ದಿನ ಅನೇಕ ಬಹುಮಾನ ಗೆಲ್ಲುವ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

















