ಡಿ.2ರಿಂದ ಉಡುಪಿ, ಕೊಲ್ಲೂರಿಗೆ ರಾಜ್ಯಪಾಲರ ಭೇಟಿ
ಉಡುಪಿ, ಡಿ.1: ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಡಿ.2 ಮತ್ತು 3ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿರುವರು.
ಡಿ.2ರಂದು ರಾತ್ರಿ 7.45ಕ್ಕೆ ಉಡುಪಿಗೆ ಆಗಮಿಸಿ ವಾಸ್ತವ್ಯ ಮಾಡಲಿರುವ ಅವರು, ಡಿ.3ರಂದು ಬೆಳಗ್ಗೆ 8.05ಕ್ಕೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿರುವರು. ಬಳಿಕ ಬೆಳಗ್ಗೆ 9.45ಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ನಂತರ ಮುರುಡೇಶ್ವರಕ್ಕೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದ್ದಾರೆ.
Next Story





