ಪುಟ್ಪಾತ್ ಅತಿಕ್ರಮಣ ತೆರವು; ಸೂಚನೆ
ಉಡುಪಿ, ಡಿ.3: ಉಡುಪಿ ನಗರಸಭಾ ವ್ಯಾಪ್ತಿಯ ಸೂಚಿತ ಪ್ರದೇಶವನ್ನು ಹೊರತು ಪಡಿಸಿ, ರಸ್ತೆ ಬದಿ ಹಾಗೂ ಪುಟ್ಪಾತ್ಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿ ಹೂವು, ಹಣ್ಣು, ತಿಂಡಿ ತಿನಿಸು ಹಾಗೂ ಇತರ ವಸ್ತುಗಳ ಮಾರಾಟ ಮಾಡುವ, ಅಂಗಡಿಗಳ ಮುಂಭಾಗ ಹೆಚ್ಚುವರಿ ಶೀಟ್ ಅಳವಡಿಸಿ ಸಾಮಾಗ್ರಿ ಇಟ್ಟಿರುವುದು ಹಾಗೂ ಕಟ್ಟಡಗಳ ಪಾರ್ಕಿಂಗ್ ಸ್ಥಳ ಅತಿಕ್ರಮಣವನ್ನು ತೆರವುಗೊಳಿಸದಿದ್ದಲ್ಲಿ, ದಂಡ ವಿಧಿಸಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story