ಡಿ.12: ಕಾರ್ಕಳದಲ್ಲಿ ಹಿಂದೂ ಸಂಗಮ
ಕಾರ್ಕಳ, ಡಿ.3: ದತ್ತ ಜಯಂತಿ ಪ್ರಯುಕ್ತ ಡಿ.12ರಂದು ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ ಕಾರ್ಕಳದಲ್ಲಿ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್ ಹಾಗೂ ಬಜರಂಗದಳ ರಾಜ್ಯ ಸಂಚಾಲಕ ಕೆ.ಆರ್. ಸುನಿಲ್ ಹೇಳಿದರು.
ಪತ್ರಿಕಾಗೋಷ್ಠಿ ನಡೆಸಿದ ಅವರು ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಕಳ ಪ್ರಖಂಡದ ವತಿಯಿಂದ ಹಿಂದೂ ಸಂಗಮ ನಡೆಯಲಿದೆ. ಹಿಂದೂ ಸಮಾಜದಲ್ಲಿ ವಿಶ್ವಾಸ ತುಂಬಿಸುವುದು. ಜಾಗೃತ ಸ್ವಾಭಿಮಾನ ಹಿಂದೂ ಸಮಾಜದ ನಿರ್ಮಾಣ ಉದ್ದೇಶ, ದತ್ತಾತ್ರೇಯ ದೇವರ ಪವಿತ್ರ ಕ್ಷೇತ್ರವಾಗಿರುವ ದತ್ತಪೀಠ ಹಿಂದುಗಳ ತೀರ್ಥ ಕ್ಷೇತ್ರವಾಗಬೇಕು. ಅಲ್ಲಿ ಹಿಂದೂ ಅರ್ಚಕರ ನೇಮಕ ಶೀಘ್ರವೇ ಆಗಬೇಕು ಅಲ್ಲಿನ ಗೋರಿಗಳನ್ನು ತತ್‌ಕ್ಷಣದಲ್ಲಿ ಸ್ಥಳಾಂತರಿಸಬೇಕು ಎನ್ನುವ ಆಗ್ರಹವಾಗಿದೆ ಎಂದರು.
ಪೇಜಾರ ಶ್ರೀ ವಿಶ್ವಪ್ರಸನ್ನ ತೀರ್ಥ ಮಠಾಧೀಶದರು, ಆನೆಗುಂದಿ ಮಹಾಸಂಸ್ಥಾನದ ಕಾಳ ಹಸ್ತೇಂದ್ರ ಸ್ವಾಮಿಜಿಯವರು ಆಶಿರ್ವಚನ ನೀಡಲಿರುವರು. ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಎಂ.ಬಿ ಪುರಾಣಿಕ್ ಅಧ್ಯಕ್ಷತೆ ವಹಿಸಲಿರುವುರು ಎಂದರು.





