ಮಂಜುನಾಥ ಭಂಡಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲುತ್ತಾರೆ: ಭರತ್ ಮುಂಡೋಡಿ ವಿಶ್ವಾಸ
ಕಾರ್ಕಳ : ಪ್ರಥಮ ಪ್ರಾಶಸ್ತ್ಯದ ಮತಗಳಿಂದಲೇ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ರಾಜ್ಯ ಕೆಪಿಸಿಸಿ ಸದಸ್ಯ, ಕಾರ್ಕಳ ವಿಧಾನ ಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ ಭರತ್ ಮುಂಡೋಡಿ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಪಂಚಾಯತ್ ಸದಸ್ಯ ಮತದಾರರ ಬೇಟಿ ಬಳಿಕ ಕಾರ್ಕಳ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು 6 ಸಾವಿರ ಸ್ಥಳೀಯಾಡಳಿತ ಸದಸ್ಯರ ಮತಗಳ ಪೈಕಿ 1885 ಕಾಂಗ್ರೆಸ್ ಬೆಂಬಲಿತ ಮತಗಳಿವೆ. ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ 11 ಮತಗಳು ಹಾಗೂ ಗ್ರಾಾ.ಪಂ. ಸದಸ್ಯರ ಪೈಕಿ 99 ಸೇರಿ ಒಟ್ಟು 110 ಕಾಂಗ್ರೆಸ್ ಬೆಂಬಲಿತ ಮತಗಳಿವೆ. 24 ಪಕ್ಷೇತರ ಮತಗಳಿವೆ. ಕಾಂಗ್ರೆಸ್ ಬೆಂಬಲಿತರು ಹೊರತು ಪಡಿಸಿ ಸ್ವತಂತ್ರ್ಯ, ಬಿಜೆಪಿ ಬೆಂಬಲಿತರ ಸಹಕಾರವನ್ನು ಕೋರಿದ್ದೇವೆ. ಬಿಜೆಪಿ ಬೆಂಬಲಿತ ಚುನಾಯಿತ ಸದಸ್ಯರಲ್ಲಿ ಬೆಲೆ ಏರಿಕೆ, ಜನಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕುರಿತು ಅಸಮಧಾನವಿದೆ. ಇದು ಕಾಂಗ್ರೆಸ್ ಮತಗಳಾಗಿ ಪರಿವರ್ತನೆಯಾಗಲಿದೆ ಇದು ಮಂಜುನಾಥ ಭಂಡಾರಿ ಗೆಲುವಿಗೆ ಅನುಕೂಲವಾಗಲಿದೆ ಎಂದರು.
ಎಸ್‌ಡಿಪಿಐ ಸ್ಪರ್ಧೆ ಕೇವಲ ಹೆಸರಿಗಷ್ಟೆ. 192 ಮತಗಳನ್ನು ಮಾತ್ರ ಪಡೆಯುವಲ್ಲಿ ಅದು ಶಕ್ತವಾಗಿದೆಯಷ್ಟೆ ಎಂದರು. ಮಂಜುನಾಥ ಭಂಡಾರಿ ಅವರು ಪಂಚಾಯತ್‌ರಾಜ್ ವ್ಯವಸ್ಥೆ ಕುರಿತು ಪ್ರಬಂಧ ಮಂಡಣೆ ಮಾಡಿ ಅದರಲ್ಲಿ ಪಿಎಚ್‌ಡಿ ಪದವಿ ಪಡೆದು ಸಮರ್ಥ ಅಭ್ಯರ್ಥಿ ಎನಿಸಿಕೊಂಡಿದ್ದಾರೆ ಎಂದರು.
ಹೆಬ್ರಿ ತಾಲೂಕು ಚುನಾವಣಾ ಉಸ್ತುವಾರಿ ಫಾರೂಕ್ ಫರಂಗಿಪೇಟೆ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ನಕ್ರೆ ಜೋರ್ಜ್ ಕ್ಯಾಸ್ತಲಿನೋ, ಸುಶಾಂತ್ ಸುಧಾಕರ್, ಜಿಲ್ಲಾ ವಕ್ತಾರ ನಕ್ರೆ ಬಿಪಿನ್‌ಚಂದ್ರಪಾಲ್, ಕಾಂಗ್ರೆಸ್ ಪ್ರಮುಖರಾದ ದಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







