Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಬೆಂಗಳೂರಿನ ಯೋಜನಾಬದ್ಧ ಬೆಳವಣಿಗೆಗೆ...

ಬೆಂಗಳೂರಿನ ಯೋಜನಾಬದ್ಧ ಬೆಳವಣಿಗೆಗೆ ಒತ್ತು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಗೋವಿಂದರಾಜನಗರ ಪೊಲೀಸ್ ಠಾಣೆ ಉದ್ಘಾಟಿಸಿದ ಸಿಎಂ

ವಾರ್ತಾಭಾರತಿವಾರ್ತಾಭಾರತಿ3 Dec 2021 11:23 PM IST
share
ಬೆಂಗಳೂರಿನ ಯೋಜನಾಬದ್ಧ ಬೆಳವಣಿಗೆಗೆ ಒತ್ತು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬೆಂಗಳೂರು ಅಂತರ್ ರಾಷ್ಟ್ರೀಯ ಹಾಗೂ ವೇಗವಾಗಿ ಬೆಳೆಯುತ್ತಿರುವ ನಗರ. ಅತಿ ಹೆಚ್ಚಿನ ವಾಹನಗಳು ನಗರದ ರಸ್ತೆಗಿಳಿಯುತ್ತವೆ. ಹೀಗಾಗಿ ಬೆಂಗಳೂರು ನಗರದ ಸಮಗ್ರ ಮತ್ತು ವ್ಯವಸ್ಥಿತ ಅಭಿವೃದ್ಧಿಗಾಗಿ  ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಲಾಗಿದ್ದು, ಹೊಸ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ಅವರು ಇಂದು ಗೋವಿಂದರಾಜನಗರ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸೀಮ್ಲೆಸ್ ಸಿಗ್ನಲ್ ಇರುವಂತಹ 195 ಕಿಮೀ ದೂರದ 12 ಹೈ ಡೆನ್ಸಿಟಿ ಕಾರಿಡಾರ್ ಗಳ ರಸ್ತೆ ನಿರ್ಮಾಣ, ಮಹಿಳೆಯರ ಸುರಕ್ಷತೆಗಾಗಿ ನಿರ್ಭಯಾ ಯೋಜನೆಯಲ್ಲಿ 7000 ಕ್ಕಿಂತ ಹೆಚ್ಚು ಆಧುನಿಕ ಕ್ಯಾಮೆರಾಗಳನ್ನು ನಗರದಲ್ಲಿ ಅಳವಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮಳೆಯಿಂದಾಗಿ ತಲೆದೋರುವ ಸಮಸ್ಯೆ ಬಗೆಹರಿಸಲು ಮಾಸ್ಟರ್ ಪ್ಲಾನ್  ಸಿದ್ಧಪಡಿಸಿ ರಾಜಕಾಲುವೆಯ ಪುನರ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೊಳಚೆ ಪ್ರದೇಶಗಳ ಅಭಿವೃದ್ಧಿ, ಕೆರೆಗಳ ಅಭಿವೃದ್ಧಿ ಸೇರಿದಂತೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸಲಾಗುತ್ತಿದೆ.

ಸಾರ್ವಜನಿಕರಿಗೆ ತೊಂದರೆಯಾದರೆ ಅವರು ಮೊದಲು ಪೊಲೀಸರಿಗೆ ಕರೆ ಮಾಡುತ್ತಾರೆ. ಮಗುವಿಗೆ ಅಮ್ಮನಿದ್ದಂತೆ, ಸಮಾಜಕ್ಕೆ ಪೊಲೀಸರು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ  ಅವರು ಅಭಿಪ್ರಾಯ ಪಟ್ಟರು. 
 
ಪೊಲೀಸರೆಂದರೆ ಹಲವಾರು ವ್ಯಾಖ್ಯಾನಗಳಿವೆ. ಪೊಲೀಸ್ ವೃತ್ತಿ ಯನ್ನು ಆಯ್ಕೆ ಮಾಡುವುದು ಅತ್ಯಂತ ಕಠಿಣವಾದ ಕೆಲಸ. ಪೊಲೀಸ್ ಕೆಲಸಕ್ಕೆ ನಿಗದಿತವಾದ ಸಮಯವಿಲ್ಲ. ಅವರು ಕೆಲಸಕ್ಕೆ ಸದಾ ಸಿದ್ಧರಿರಬೇಕು.  ಆಪತ್ಭಾಂಧವರಾದ  ಪೊಲೀಸರ  ಸೇವೆ ಬಹಳ ಪ್ರಮುಖವಾದುದ್ದು. ಗೃಹ ಸಚಿವನಾದ ಸಂದರ್ಭದಲ್ಲಿ ಅವರನ್ನು ಹತ್ತಿರದಿಂದ ಕಾಣುವ ಅವಕಾಶ ದೊರೆತಿದ್ದು, ಅವರ ಬಗ್ಗೆ ಅಪಾರ ಗೌರವ, ಹೆಮ್ಮೆ ಇದೆ.  ಭಾರತದಲ್ಲಿ ನಂಬರ್ ಒನ್ ಪೊಲೀಸರಿದ್ದರೆ, ಅದು ಕರ್ನಾಟಕದ ಪೊಲೀಸರು ಎಂದರು. 

► ಉತ್ತಮ ಕಾನೂನು ಸುವ್ಯವಸ್ಥೆ

ಒಂದು ಕಾಲದಲ್ಲಿ ಬೆಂಗಳೂರು ರೌಡಿ ರಾಜ್ಯವಾಗಿತ್ತು. ಎಲ್ಲಿ ನೋಡಿದರೂ  ಕೊಲೆ, ಸುಲಿಗೆ, ಗ್ಯಾಂಗ್ ಗಳ ಸುದ್ದಿಗಳಿಂದ ಪತ್ರಿಕೆಗಳು ತುಂಬಿರುತ್ತಿದ್ದವು. ಇಂದು ಅವೆಲ್ಲವೂ ಕಡಿಮೆಯಾಗಿವೆ. ಕೆಲವು ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ,  ಸಂಪೂರ್ಣವಾಗಿ  ನಿಯಂತ್ರಣ ದಲ್ಲಿದ್ದು,  ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಅಗತ್ಯ. ಯಾವುದೇ ರಾಜಿಯಿಲ್ಲದ ನಾಯಕತ್ವವಿದ್ದಾಗ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಿಂದು ಮುಂದು ನೋಡದೆ,  ಕಾನೂನು ಸುವ್ಯವಸ್ಥೆಯನ್ನು ಬಲ ಪಡಿಸುತ್ತಾರೆ ಎಂದರು. 

► ಮಾದಕವಸ್ತುಗಳ ಮೇಲೆ ಗದಾಪ್ರಹಾರ

ಕರ್ನಾಟಕದ ಮತ್ತು ಬೆಂಗಳೂರು ಪೊಲೀಸರು ಮಾದಕವಸ್ತು ಗಳ ವಿರುದ್ಧ ಸಮರ ಸಾರಿದ್ದಾರೆ. 2 ವರ್ಷಗಳಲ್ಲಿ ಇಡೀ ಭಾರತದ ದೇಶದಲ್ಲಿ ವಶಪಡಿಸಿಕೊಂಡಿರುವ ಮಾದಕವಸ್ತುಗಳನ್ನು ಕರ್ನಾಟಕದಲ್ಲಿ   ವಶಪಡಿಸಿಕೊಳ್ಳಲಾಗಿದೆ. ವಿದೇಶಿಯರೂ ಸೇರಿದಂತೆ  ನೂರಾರು ಜನರನ್ನು ಬಂಧಿಸಲಾಗಿದೆ. ಡಾರ್ಕ್ ವೆಬ್, ಕರಾವಳಿಯ ಮೂಲಕ ಹಾಗೂ ಇನ್ನಿತರ   ರೀತಿಗಳಲ್ಲಿ ತರುತ್ತಿದ್ದನ್ನು ಭೇದಿಸಿ ಹೆಡೆಮುರಿ ಕಟ್ಟಿರುವುದು ನಮ್ಮ ಕರ್ನಾಟಕ ಹಾಗೂ ಬೆಂಗಳೂರು ಪೊಲೀಸ್ ಎಂದರು. 50 ಕೋಟಿ ರೂ.ಮೌಲ್ಯ ಡ್ರಗ್ಸ್ ನ್ನು ಒಂದೇ ದಿನದಲ್ಲಿ ಸುಟ್ಟು ಹಾಕಲಾಗಿದೆ. ಇದೊಂದು ದಾಖಲೆ. ಯಾವ ಕಾರಣಕ್ಕೂ ರಾಜಿ ಇಲ್ಲ ಎನ್ನುವ ನೀತಿಯನ್ನು ಅರಗ ಜ್ಞಾನೇಂದ್ರ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸಮಾಜದ ಪಿಡುಗುಗಳನ್ನು ದೂರ ಮಾಡಲು ಕಠಿಣ ಕ್ರಮಗಳನ್ನು ಹಾಗೂ  ರಾಜಕಾರಣದಲ್ಲಿ ಗಟ್ಟಿ ನಿಲುವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಆನ್ ಲೈನ್ ಜೂಜು ನಿರ್ಬಂಧಿಸಲು ಕಾನೂನು: ಜೂಜಾಡುವುದು ಈವರೆಗೆ  ದಸ್ತಗಿರಿ ಮಾಡಬಹುದಾದ ಅಪರಾಧವಾಗಿರಲಿಲ್ಲ. ಕಾನೂನು ತಿದ್ದುಪಡಿ ತಂದು,  ವ್ಯವಸ್ಥಿತವಾಗಿ ಜೂಜಾಡುವವರನ್ನು ಬಂಧಿಸಿ, 3-5 ವರ್ಷಗಳ ಶಿಕ್ಷೆ ಗೆ ಗುರಿಪಡಿಸುವ ಹೊಸ ಕಾನೂನನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ.

ಕ್ರಿಕೆಟ್, ಫುಟ್ ಬಾಲ್ ಆನ್ ಲೈನ್ ಜೂಜು ನಿರುಮ್ಮಳವಾಗಿ ನಡೆಯುತ್ತಿತ್ತು. ಯುವಕರು ಜೂಜಿನ ಚಟಕ್ಕೆ ಬಿದ್ದರೆ ಆ ಕುಟುಂಬ ಹಾಳಾಗುತ್ತದೆ. ಈ ಅಪರಾಧವನ್ನು ತಡೆಗಟ್ಟಲು ಆನ್ ಲೈನ್ ಜೂಜಿನ ವಿರುದ್ಧ ಕಾನೂನನ್ನು ತರಲಾಗುವುದು. ಈ ನಿರ್ಬಂಧದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ಜೂಜಿನಿಂದಾಗಿ ಲಕ್ಷಗಟ್ಟಲೆ ಕುಟುಂಬಗಳು ಹಾಳಾಗುತ್ತಿರುವ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಸಮಾಜ ಜಾಗೃತವಾಗಿ ಆನ್ ಲೈನ್ ಜೂಜನ್ನು ತಡೆಗಟ್ಟಬೇಕಾಗಿದೆ. ಈ ನಿರ್ಬಂಧವನ್ನು ಹೇರಲು ಪ್ರಭಾವಿಗಳು ವಿರೋಧವ್ಯಕ್ತಪಡಿಸಿದರೂ ಸರ್ಕಾರ ಈ ಕಾನೂನನ್ನು ಜಾರಿಗೆ ತರುತ್ತಿದೆ. ಸಮಾಜಘಾತುಕ ಶಕ್ತಿಗಳನ್ನು ಸರ್ಕಾರ ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತಿದೆ ಎಂದರು. 

► ವಸತಿ ಕ್ಷೇತ್ರದಲ್ಲಿ ಕ್ರಾಂತಿ

ಸಚಿವ ಸೋಮಣ್ಣ  ಅವಾರ ನೇತೃತ್ವದಲ್ಲಿ   ಕೊಳಚೆ  ಪ್ರದೇಶದವರಿಗೆ  ರಾಜ್ಯದಾದ್ಯಂತ 1,80,000 ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.  ಬೆಂಗಳೂರು ನಗರಕ್ಕೆ 1 ಲಕ್ಷ ಮನೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 5 ಲಕ್ಷ ಮನೆಗಳ ನಿರ್ಮಾಣವನ್ನು  ಬಸವ ವಸತಿ ಯೋಜನೆಯಡಿ ಅನುಷ್ಠಾನಕ್ಕೆ ತರುವ ಮೂಲಕ ವಸತಿ ಕ್ಷೇತ್ರದಲ್ಲಿ ಕ್ರಾಂತಿಯನ್ನು ತರಲಾಗಿದೆ ಎಂದರು. 

ಗೋವಿಂದರಾಜನಗರದಲ್ಲಿರುವ ಪೊಲೀಸ್ ಠಾಣೆಗೆ ಬರುವವರಿಗೆ ಸಹಾನುಭೂತಿ, ರಕ್ಷಣೆ ಹಾಗೂ ನ್ಯಾಯವನ್ನು ಕೊಡುವ ಕೇಂದ್ರವಾಗಲಿ. ನಗರದ ಪ್ರತಿಯೊಂದು ವಾರ್ಡ್ ಅಭಿವೃದ್ಧಿ ಹೊಂದುವಂತೆ ಕಾರ್ಯಕ್ರಮ ರೂಪಿಸಲಾಗುವುದು. ಬೆಂಗಳೂರಿನ ಯೋಜನಾಬದ್ಧ ಬೆಳವಣಿಗೆಗೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X