Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಒಮೈಕ್ರಾನ್‌ಗಿಂತಲೂ ಭೀಕರವಾಗಿರುವ ಸರಕಾರದ...

ಒಮೈಕ್ರಾನ್‌ಗಿಂತಲೂ ಭೀಕರವಾಗಿರುವ ಸರಕಾರದ ‘ಲಸಿಕೆ’ ಮಾರ್ಗಸೂಚಿ

ವಾರ್ತಾಭಾರತಿವಾರ್ತಾಭಾರತಿ4 Dec 2021 12:05 AM IST
share
ಒಮೈಕ್ರಾನ್‌ಗಿಂತಲೂ ಭೀಕರವಾಗಿರುವ ಸರಕಾರದ ‘ಲಸಿಕೆ’ ಮಾರ್ಗಸೂಚಿ

‘ರಾಜ್ಯದಲ್ಲಿ ಲಾಕ್‌ಡೌನ್ ಇಲ್ಲ’ ಎಂದು ಮುಖ್ಯಮಂತ್ರಿ ಘೋಷಿಸಿದಾಗಲೇ ‘ಇದು ಲಾಕ್‌ಡೌನ್ ವಿಧಿಸುವ ಕುರಿತಂತೆ ಸರಕಾರ ನೀಡಿರುವ ಮುನ್ಸೂಚನೆ’ ಎನ್ನುವುದನ್ನು ಶ್ರೀಸಾಮಾನ್ಯರು ಅರ್ಥ ಮಾಡಿಕೊಂಡಿದ್ದರು. ಇದೀಗ ‘ಅಘೋಷಿತ ಲಾಕ್‌ಡೌನ್’ನ್ನು ಸರಕಾರ ಘೋಷಿಸಿಯೇ ಬಿಟ್ಟಿದೆ. ‘ಒಮೈಕ್ರಾನ್’ ಸೋಂಕಿತರು ಪತ್ತೆಯಾಗುವುದನ್ನೇ ಕಾಯುತ್ತಿರುವಂತೆ ಸರಕಾರ, ಮಾರ್ಗ ಸೂಚಿಗಳನ್ನು ಹೊರಡಿಸಿದೆ. ಆದರೆ ಈ ಮಾರ್ಗಸೂಚಿ, ‘ಜನರ ಮೇಲೆ ಲಸಿಕೆಗಳನ್ನು ಹೇರುವ’ ಒಂದೇ ಒಂದು ಉದ್ದೇಶದಿಂದ ಹೊರಡಿಸಲಾಗಿದೆ ಎಂದು ಜನಸಾಮಾನ್ಯರು ಮತ್ತು ವೈದ್ಯಕೀಯ ತಜ್ಞರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೊರೋನ ನಿಯಂತ್ರಣಕ್ಕೂ, ಈ ಮಾರ್ಗಸೂಚಿಗೂ ಯಾವುದೇ ಸಂಬಂಧವಿಲ್ಲ. ಇದೊಂದು ತಲೆಬುಡವಿಲ್ಲದ, ಅಪ್ರಬುದ್ಧವಾದ ನಡೆಯಾಗಿದೆ ಎನ್ನುವುದು ಬಹುತೇಕ ಜನರ ಅಭಿಪ್ರಾಯವಾಗಿದೆ. ಇದರಿಂದಾಗಿ ಜನಸಾಮಾನ್ಯರು ಮತ್ತೆ ಹಲವು ರೀತಿಯ ಗೊಂದಲ, ಆತಂಕದಲ್ಲಿ ಸಿಲುಕಿಕೊಳ್ಳುವಂತಾಗಿದೆ.

ಇಂದಿಗೂ ಒಂದೆರಡು ದೇಶ ಹೊರತು ಪಡಿಸಿದರೆ, ಶ್ರೀಮಂತ ದೇಶಗಳು ಲಸಿಕೆಯನ್ನು ಕಡ್ಡಾಯವಾಗಿ ಜನರ ಮೇಲೆ ಹೇರಿಲ್ಲ. ಅಷ್ಟೇ ಅಲ್ಲ, ಲಸಿಕೆಯನ್ನು ಜನರ ಮೇಲೆ ಬಲವಂತವಾಗಿ ಹೇರಬಾರದು ಎನ್ನುವ ಬಹುದೊಡ್ಡ ಆಂದೋಲನವೇ ವಿಶ್ವಾದ್ಯಂತ ನಡೆಯುತ್ತಿದೆ. ಇದಕ್ಕೂ ಕಾರಣಗಳಿವೆ. ಈಗಾಗಲೇ ಮಾನ್ಯತೆ ಪಡೆದಿರುವ ಯಾವುದೇ ಲಸಿಕೆಗಳು, ಕೊರೋನವನ್ನು ತಡೆಯಬಲ್ಲ ಅಧಿಕೃತ ಲಸಿಕೆಯೆಂದು ವೈದ್ಯಕೀಯ ರಂಗ ಘೋಷಿಸಿಲ್ಲ. ಅದು ನಿಮ್ಮೊಳಗಿನ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವುದು ಲಸಿಕೋದ್ಯಮ ನೀಡುವ ಸಮಾಧಾನ. ‘ಸಾವಿನ ಸಾಧ್ಯತೆ ಕಡಿಮೆ’ ಎನ್ನುವುದು ಇನ್ನೊಂದು ಸ್ಪಷ್ಟೀಕರಣ. ಲಸಿಕೆ ಎನ್ನುವುದು ಕೊರೋನಕ್ಕೆ ಅಧಿಕೃತ ಔಷಧಿಯಂತೂ ಅಲ್ಲವೇ ಅಲ್ಲ. ಇದೇ ಸಂದರ್ಭದಲ್ಲಿ, ಲಸಿಕೆಯನ್ನು ಕೆಲವು ನಿರ್ದಿಷ್ಟ ಸಮಸ್ಯೆಗಳಿರುವವರು ಪಡೆಯುವುದು ಅಪಾಯಕಾರಿ. ಕೊರೋನ ಒಮ್ಮೆ ಬಂದು ಹೋದವರು ಪ್ರತಿರೋಧ ಶಕ್ತಿಯನ್ನು ತನ್ನಷ್ಟಕ್ಕೆ ಪಡೆದುಕೊಳ್ಳುತ್ತಾರೆ ಎಂದೂ ವೈದ್ಯರು ತಿಳಿಸುತ್ತಾರೆ. ಹೀಗೆ ಕೊರೋನ ಬಂದು ಗುಣಮುಖರಾದವರು ಲಸಿಕೆ ಪಡೆದುಕೊಂಡರೂ ಅದರಿಂದ ವಿಶೇಷ ಪ್ರಯೋಜನವಿಲ್ಲ ಎನ್ನುವುದು ಅವರ ತರ್ಕ. ಈ ದೇಶದಲ್ಲಿ ಈಗಾಗಲೇ ಮೊದಲ ಮತ್ತು ಎರಡನೇ ಅಲೆಯಲ್ಲಿ ಬಹುಸಂಖ್ಯಾತರು ಕೊರೋನ ಬಂದು ಗುಣಮುಖರಾಗಿದ್ದಾರೆ. ಯಾವುದೇ ಔಷಧಿಗಳಿಲ್ಲದೆ ಮನೆಯಲ್ಲೇ ಅಂತರ ಕಾಪಾಡಿಕೊಂಡು ಕೊರೋನವನ್ನು ಗುಣಪಡಿಸಿಕೊಂಡವರೂ ಇದ್ದಾರೆ. ಕೊರೋನ ಪರೀಕ್ಷೆಯನ್ನು ಹೆಚ್ಚಿಸಿದಾಕ್ಷಣ ಕೊರೋನಾ ಕಡಿಮೆಯಾಗುವುದಿಲ್ಲ. ಬದಲಿಗೆ ಇದ್ದ ಬಿದ್ದವರೆಲ್ಲ ಕೊರೋನಕ್ಕೆ ಹೆದರಿ ಆಸ್ಪತ್ರೆ ಸೇರಿಕೊಂಡು ಇಡೀ ಆಸ್ಪತ್ರೆಗಳ ವ್ಯವಸ್ಥೆಯೇ ಅಸ್ತವ್ಯಸ್ತವಾಗುತ್ತದೆ.

ಎರಡನೇ ಅಲೆಯಲ್ಲಿ ಅಪಾರ ಸಾವು ನೋವುಗಳಿಗೆ ಆಸ್ಪತ್ರೆಗಳಲ್ಲಾದ ಅವ್ಯವಸ್ಥೆಯೇ ಕಾರಣವಾಗಿತ್ತು. ಅನಗತ್ಯ ಪರೀಕ್ಷೆಗಳನ್ನು ಮಾಡಲು ಆದೇಶ ನೀಡುವುದೆಂದರೆ, ಮೂರನೇ ಅಲೆಯೊಂದನ್ನು ಸರಕಾರವೇ ಸ್ವಯಂ ಸೃಷ್ಟಿಸುವುದು. ಇದೇ ಸಂದರ್ಭದಲ್ಲಿ ಲಸಿಕೆಯಿಂದ ಹತ್ತು ಹಲವು ಅಡ್ಡ ಪರಿಣಾಮಗಳಾಗಿವೆ. ಹಲವರು ಸತ್ತಿದ್ದಾರೆ. ಆದುದರಿಂದ ಲಸಿಕೆಗಳನ್ನು ಜನರ ಮೇಲೆ ಬಲವಂತವಾಗಿ ಹೇರಬಾರದು ಎಂದು ಪ್ರಜ್ಞಾವಂತರು ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದಾರೆ. ಅದರ ವಿಚಾರಣೆಯೂ ನಡೆಯುತ್ತಿದೆ. ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆದು, ನಾಳೆ ನ್ಯಾಯಾಲಯ ‘ಲಸಿಕೆ ಐಚ್ಛಿಕವಾದುದು. ಇಷ್ಟವಿದ್ದವರಷ್ಟೇ ಹಾಕಿಸಿಕೊಳ್ಳಬೇಕು’ ಎಂದು ತೀರ್ಪು ನೀಡಿದರೆ? ಇದೇ ಸಂದರ್ಭದಲ್ಲಿ, ಲಸಿಕೆಯ ಕುರಿತಂತೆ ಅನಗತ್ಯ ಆತಂಕಗಳನ್ನು ಹೊಂದಿದವರು ಹಾಕಿಸಿಕೊಳ್ಳುವುದು ಕೂಡ ಅಪಾಯಕಾರಿ. ಮಾನಸಿಕವಾಗಿ ದುರ್ಬಲರು ಇದರಿಂದ ಮಾನಸಿಕ ಆಘಾತಕ್ಕೂ ಈಡಾಗಬಹುದು. ಕೇಂದ್ರ ಸರಕಾರವೂ ‘ಲಸಿಕೆ ಐಚ್ಛಿಕ’ ಎಂದು ನ್ಯಾಯಾಲಯದ ಮುಂದೆ ಹೇಳಿರುವಾಗ, ರಾಜ್ಯ ಸರಕಾರಗಳು ಅಡ್ಡ ದಾರಿಯ ಮೂಲಕ ಜನರ ಮೇಲೆ ಲಸಿಕೆಯನ್ನು ಹೇರುವುದು ಎಷ್ಟು ಸರಿ? ಎಲ್ಲಕ್ಕಿಂತ ಮುಖ್ಯವಾಗಿ ಒಮೈಕ್ರಾನ್ ಪತ್ತೆಯಾದವರಲ್ಲಿ ಹೆಚ್ಚಿನವರು ಲಸಿಕೆ ಹಾಕಿಸಿಕೊಂಡವರೇ ಆಗಿದ್ದಾರೆ. ಹೀಗಿರುವಾಗ, ಏಕಾಏಕಿ ಲಸಿಕೆಯನ್ನು ಜನರ ಮೇಲೆ ಹೇರುವುದರಿಂದ ಏನು ಪ್ರಯೋಜನ?

ಈ ಮಾರ್ಗಸೂಚಿಯ ಪ್ರಕಾರ, ಪೋಷಕರು ಲಸಿಕೆ ತೆಗೆದುಕೊಳ್ಳದೇ ಇದ್ದರೆ ಮಕ್ಕಳು ಶಾಲೆಗೆ ಹೋಗುವಂತಿಲ್ಲ. ಅಂದರೆ ಮಕ್ಕಳ ಶಿಕ್ಷಣಕ್ಕಾಗಿ ಪೋಷಕರು ಲಸಿಕೆ ತೆಗೆದುಕೊಳ್ಳಲೇ ಬೇಕು ಎನ್ನುವಂತಹ ಅನಿವಾರ್ಯವನ್ನು ಸರಕಾರ ಸೃಷ್ಟಿಸಿದೆ. ಲಸಿಕೆ ಪಡೆದುಕೊಳ್ಳದೇ ಇರುವವರಲ್ಲಿ ಗ್ರಾಮೀಣ ಪ್ರದೇಶದ ಜನರೇ ಅಧಿಕ. ಇವರಲ್ಲಿ ಒಂದು ಡೋಸ್‌ನ್ನು ಪಡೆಯಲು ಸಾಧ್ಯವಾಗದವರೂ ಇದ್ದಾರೆ. ಅವರೆಲ್ಲ ಲಸಿಕೆ ಹಾಕಿಕೊಳ್ಳುವವರೆಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಂತಿಲ್ಲ. ಸುಮಾರು ಒಂದೂವರೆ ತಿಂಗಳ ಕಾಲ ಮಕ್ಕಳು ಶಿಕ್ಷಣ ವಂಚಿತರಾಗುತ್ತಾರೆ. ನಗರ ಮತ್ತು ಗ್ರಾಮೀಣ ಪ್ರದೇಶದ ನಡುವಿನ ಶಿಕ್ಷಣದಲ್ಲಿ ಭಾರೀ ಅಸಮಾನತೆಯನ್ನು ಇದು ಸೃಷ್ಟಿಸಬಹುದು. ಹಾಗೆಯೇ ಈ ಆತುರಾತುರವಾದ ಲಸಿಕೆ ನೀಡುವಿಕೆ, ಇನ್ನಷ್ಟು ಅಕ್ರಮಗಳಿಗೆ ಕಾರಣವಾಗಬಹುದು. ಲಸಿಕೆಗಾಗಿ ಜನರನ್ನು ಶೋಷಿಸುವ, ವಂಚಿಸುವವರ ಸಂಖ್ಯೆ ಹೆಚ್ಚಾಗಬಹುದು. ಇದೇ ಸಂದರ್ಭದಲ್ಲಿ ಮಾಲ್‌ಗಳಿಗೆ, ಥಿಯೇಟರ್‌ಗಳಿಗೆ ಪ್ರವೇಶಿಸುವುದಕ್ಕೂ ಲಸಿಕೆ ಕಡ್ಡಾಯ ಎಂದು ಸರಕಾರ ಹೇಳುತ್ತಿದೆ. ಈ ಮಾರ್ಗಸೂಚಿ ನಗರ ಕೇಂದ್ರಿತವಾಗಿದೆ.

ಆದರೆ ನಿಜಕ್ಕೂ ಲಸಿಕೆ ಬೇಡ ಎನ್ನುವವರು ಮಾಲ್‌ಗಳನ್ನು, ಥಿಯೇಟರ್‌ಗಳನ್ನು ಬಹಿಷ್ಕರಿಸಬಹುದು. ಇದು ನಗರ ಪ್ರದೇಶದ ಆರ್ಥಿಕತೆಯ ಮೇಲೆ ಇನ್ನಷ್ಟು ಪರಿಣಾಮ ಬೀರಲಿದೆ. ಮಾಲ್, ಥಿಯೇಟರ್‌ಗಳಲ್ಲಿ ಮಾತ್ರ ಲಸಿಕೆ ಕಡ್ಡಾಯ ಗೊಳಿಸಿರುವ ಉದ್ದೇಶವಾದರೂ ಏನು? ಕೊರೋನ ಮಾಲ್‌ಗಳಲ್ಲಿ ಮತ್ತು ಥಿಯೇಟರ್‌ಗಳಲ್ಲಿ ಮಾತ್ರ ಓಡಾಡುತ್ತಿರುತ್ತವೆಯೇ? ಮದುವೆ ಇತ್ಯಾದಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಜನರ ಮಿತಿಯನ್ನು ಹೇರಿದೆ. ಇತ್ತ ಧಾರ್ಮಿಕ ಕಾರ್ಯಕ್ರಮಗಳಿಗೆ ಜನ ಸೇರುವ ಕುರಿತಂತೆ ವೌನ ತಾಳಿದೆ. ಅಷ್ಟೇ ಅಲ್ಲ ರಾಜಕೀಯ ಕಾರ್ಯಕ್ರಮಗಳಿಗೆ ಎಷ್ಟು ಜನ ಸೇರಬಹುದು ಎನ್ನುವುದರ ಬಗ್ಗೆಯೂ ಸರಕಾರ ಮಾತನಾಡುತ್ತಿಲ್ಲ. ಕೊರೋನವನ್ನು ಎದುರಿಸುವ ಕುರಿತಂತೆ ಸರಕಾರ ಅನುಸರಿಸುತ್ತಿರುವ ದ್ವಂದ್ವ ನೀತಿಯನ್ನು ಇದು ಹೇಳುತ್ತದೆ. ಸರಕಾರದ ಹೊಸ ಮಾರ್ಗಸೂಚಿ, ಇರುವ ಲಸಿಕೆಗಳನ್ನು ಜನರ ಮೇಲೆ ಹೇರುವ ಒಂದೇ ಒಂದು ಉದ್ದೇಶವನ್ನು ಹೊಂದಿದಂತಿದೆ. ಕೊರೋನದ ಕುರಿತಂತೆ ಅದು ಯಾವುದೇ ಪ್ರಾಮಾಣಿಕ ಕಾಳಜಿಯನ್ನು ಹೊಂದಿಲ್ಲ. ಇಂದು ಜನರಿಗೆ ಬೇಕಾಗಿರುವುದು ಉದ್ಯೋಗ. ಜೊತೆಗೆ ಆಹಾರ, ಶಿಕ್ಷಣ ಮತ್ತು ಆರ್ಥಿಕ ಭದ್ರತೆ. ಜನರು ಕೊರೋನಕ್ಕಾಗಿ ಹೆದರುತ್ತಿಲ್ಲ. ಕೊರೋನದ ಹೆಸರಿನಲ್ಲಿ ಸ್ಥಾಪಿತ ಹಿತಾಸಕ್ತಿಗಳ ರಾಜಕೀಯಕ್ಕೆ ಹೆದರುತ್ತಿದ್ದಾರೆ. ಈ ಹಿತಾಸಕ್ತಿಗಳು ತಮ್ಮ ದುರುದ್ದೇಶವನ್ನು ಸಾಧಿಸಲು ಸರಕಾರವನ್ನು ಬಳಸುತ್ತಿರುವ ಕುರಿತಂತೆ ಹೆದರುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರಿಗೆ ಯಾವ ರೀತಿಯಲ್ಲಿ ನೆರವು ನೀಡಬಹುದು ಎನ್ನುವುದರ ಬಗ್ಗೆ ಸರಕಾರ ಯೋಚಿಸಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X