ರಾಜ್ಯದ ಕಾರಾಗೃಹಗಳಲ್ಲಿ ನವಚೇತನ ಕಾರ್ಯಕ್ರಮಗಳ ಆಯೋಜನೆ
ಬೆಂಗಳೂರು, ಡಿ.3: ಕರ್ನಾಟಕ ರಾಜ್ಯದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ವತಿಯಿಂದ ಕಾರಾಗೃಹದ ಖೈದಿಗಳಿಗೆ “ನವಚೇತನ” ಕಾರ್ಯಕ್ರಮ ಆಯೋಜಿಸಲಾಗಿದೆ.
ನ.1 ರಂದು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ರಾಜ್ಯದ ಎಲ್ಲಾ 51 ಕಾರಾಗೃಹಗಳಲ್ಲಿ ‘ಲೋಕ ಶಿಕ್ಷಣ ನಿರ್ದೇಶನಾಲಯ’ರವರ ಸಹಯೋಗದಲ್ಲಿ ಎಲ್ಲಾ 7000 ಅನಕ್ಷರಸ್ಥ ಹಾಗೂ ಅರೆ ಅನಕ್ಷರಸ್ಥ ಬಂದಿಗಳಿಗೆ ‘ಸಾಕ್ಷರತಾ ಕಾರ್ಯಕ್ರಮ’ವನ್ನು ಈಗಾಗಲೇ ಪ್ರಾರಂಭಿಸಲಾಗಿದೆ.
ಡಿ.1 ರಂದು ರಾಜ್ಯದ ಎಲ್ಲಾ 51 ಕಾರಾಗೃಹಗಳಲ್ಲಿ ಸುಮಾರು 15,000 ಬಂದಿಗಳಿಗೆ ಹಾಗೂ 3500 ಸಿಬ್ಬಂದಿಗಳಿಗೆ ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮ (ಯೋಗ) ಕಾರ್ಯಕ್ರಮಗಳನ್ನು ‘ಆರ್ಟ್ ಆಫ್ ಲಿವಿಂಣ್’ ಮತ್ತು ‘ಇಶಾ ಫೌಂಡೇಶನ್’ ಹಾಗೂ ‘ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ’ (ಕೆ.ಎಸ್.ಡಿ.ಸಿ) ಮತ್ತು ‘ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ’ (ಎನ್.ಎಸ್.ಡಿ.ಸಿ) ರವರ ಸಹಯೋಗದಲ್ಲಿ ವಿವಿಧ ರೀತಿಯ “ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ” ಗಳನ್ನು ಪ್ರಾರಂಭಿಸಲಾಗಿರುತ್ತದೆ.
Next Story





