ಉತ್ತರಪ್ರದೇಶ: ವಿದೇಶದಿಂದ ವಾಪಸಾದ 13 ಮಂದಿಯಿಂದ ತಪ್ಪು ವಿಳಾಸ

ಸಾಂದರ್ಭಿಕ ಚಿತ್ರ
ಲಕ್ನೋ: ಉತ್ತರ ಪ್ರದೇಶದ ಮೀರತ್ಗೆ ಬಂದಿಳಿದ ಸುಮಾರು 300 ಅಂತರ್ ರಾಷ್ಟ್ರೀಯ ಪ್ರಯಾಣಿಕರ ಪೈಕಿ 13 ಮಂದಿ ಆಡಳಿತಕ್ಕೆ ತಪ್ಪು ಸಂಪರ್ಕ ವಿವರಗಳನ್ನು ಒದಗಿಸಿದ್ದಾರೆ .ಅವರನ್ನು ಪತ್ತೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಎಂದು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ.
ಅವರನ್ನು ಗುರುತಿಸಲು ಹಾಗೂ ಅವರ ಪರೀಕ್ಷೆಗಳನ್ನು ಮಾಡಲು ಈಗ ಅಧಿಕಾರಿಗಳನ್ನು ಅವರ ಮನೆಗಳಿಗೆ ಕಳುಹಿಸಲಾಗುತ್ತಿದೆ ಎಂದು ಮೀರತ್ನ ಮುಖ್ಯ ವೈದ್ಯಕೀಯ ಅಧಿಕಾರಿ ಅಖಿಲೇಶ್ ಮೋಹನ್ ಹೇಳಿದ್ದಾರೆ. ಒಂದು ವೇಳೆ ಈ ಮನೆಗಳು ಪತ್ತೆಯಾಗದಿದ್ದಲ್ಲಿ ಸ್ಥಳೀಯ ಗುಪ್ತಚರ ದಳಕ್ಕೆ ಮಾಹಿತಿ ನೀಡಿ ಪತ್ತೆ ಹಚ್ಚಲು ಸಹಾಯ ಮಾಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
‘’ವಿದೇಶದಿಂದ ವಾಪಸಾಗಿರುವ 297 ಜನರ ಪೈಕಿ 13 ಮಂದಿ ಆಡಳಿತಕ್ಕೆ ತಪ್ಪು ಮೊಬೈಲ್ ಸಂಖ್ಯೆಗಳು ಹಾಗೂ ವಿಳಾಸಗಳನ್ನು ನೀಡಿದ್ದಾರೆ. ಅವರು ನಮಗೆ ಒದಗಿಸಿದ ವಿವರಗಳನ್ನು ಅವರು ಎಲ್ಲಿದ್ದಾರೆ ಎಂಬುದನ್ನು ಕಂಡುಹಿಡಿಯಲು ಸ್ಥಳೀಯ ಗುಪ್ತಚರ ಘಟಕಕ್ಕೆ ನೀಡಲಾಗಿದೆ" ಎಂದು ಮೀರತ್ ಸಿಎಂಒ ಡಾ ಅಖಿಲೇಶ್ ಮೋಹನ್ ಹೇಳಿಕೆ ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.