ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಕ್ರಿಕೆಟ್ ಪ್ರವಾಸ ಕೈಗೊಳ್ಳಲಿದೆ: ದೃಢಪಡಿಸಿದ ಜಯ್ ಶಾ

ಹೊಸದಿಲ್ಲಿ: ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಳ್ಳಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಶನಿವಾರದಂದು ಖಚಿತಪಡಿಸಿದ್ದಾರೆ. ಆದರೆ ಕೇವಲ ಮೂರು ಟೆಸ್ಟ್ ಸರಣಿ ಹಾಗೂ ಮೂರು ಏಕದಿನ ಪಂದ್ಯಗಳಿಗೆ ಮಾತ್ರ ಇರಲಿದೆ ಎಂದರು.
ಮೂಲತಃ ಪ್ರವಾಸದ ಪಂದ್ಯದ ಭಾಗವಾಗಿದ್ದ ನಾಲ್ಕು ಪಂದ್ಯಗಳ ಟ್ವೆಂಟಿ-ಸರಣಿಗಳನ್ನು ಈಗ ಮುಂದೂಡಲಾಗಿದೆ.
"ಭಾರತೀಯ ಕ್ರಿಕೆಟ್ ತಂಡವು ಮೂರು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿಎಎಸ್ ಎ ಗೆ ದೃಢಪಡಿಸಿದೆ. ಉಳಿದ ನಾಲ್ಕು ಟಿ-20 ಪಂದ್ಯಗಳನ್ನು ನಂತರದ ದಿನಾಂಕದಲ್ಲಿ ಆಡಲಾಗುತ್ತದೆ" ಎಂದು ಶಾ ANI ಗೆ ತಿಳಿಸಿದರು.
Next Story