ಅನಿವಾಸಿ ಕನ್ನಡಿಗರ ಒಕ್ಕೂಟ ರಾಸ್ ಅಲ್ ಖೈಮ ವತಿಯಿಂದ ರಕ್ತದಾನ ಶಿಬಿರ

ರಾಸ್ ಅಲ್ ಖೈಮ: ಅನಿವಾಸಿ ಕನ್ನಡಿಗರ ಒಕ್ಕೂಟ ರಾಸ್ ಅಲ್ ಖೈಮ ವತಿಯಿಂದ ರಕ್ತದಾನ ಶಿಬಿರವು ಸಾಕರ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ರಾಸ್ ಅಲ್ ಖೈಮ ಇದರ ಸಹಯೋಗದೊಂದಿಗೆ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅನಿವಾಸಿ ಕನ್ನಡಿಗರ ಒಕ್ಕೂಟ ಇದರ ಸಫ್ವಾನ್ ಸುರತ್ಕಲ್ ಹಾಗೂ ಸಲೀಮ್ ಪುತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಯೊಂದು ರಕ್ತದ ಕಣ ಒಂದು ಜೀವವನ್ನು ಉಳಿಸಬಲ್ಲದು. ಪ್ರತಿಯೊಬ್ಬರು ರಕ್ತ ದಾನ ನೀಡುವ ಮೂಲಕ ಮಾನವೀಯತೆಯನ್ನು ಬೆಳೆಸಬೇಕು ಎಂಬ ವಿವರಣೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಕ್ತದಾನ ಶಿಬಿರದಲ್ಲಿ ಸುಮಾರು 34 ಮಂದಿ ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎಂದು ಪ್ರಕಟನೆ ತಿಳಿಸಿದೆ.
Next Story





