ಮಂಗಳೂರು; 7ನೆ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಮಂಗಳೂರು, ಡಿ.4: ನಗರದ ಶಾಲೆಯೊಂದರಲ್ಲಿ 7ನೆ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆಟೋ ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು 32ರ ಹರೆಯದ ಮೂಲತ ಶಿವಮೊಗ್ಗ ನಿವಾಸಿಯಾಗಿದ್ದು, ಹಾಲಿ ಮಂಗಳೂರಿನಲ್ಲಿ ವಾಸವಾಗಿದ್ದ.
ಸಂತ್ರಸ್ತ ಬಾಲಕಿ 3 ಹಾಗೂ 4ನೆ ತರಗತಿಯಲ್ಲಿ ಕಲಿಯುತ್ತಿದ್ದ ವೇಳೆಯೂ ಆಕೆಯನ್ನು ಆಟೋದಲ್ಲಿ ಶಾಲೆಗೆ ಡ್ರಾಪ್ ಮಾಡುವ ವೇಳೆ ಈತ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಕಳೆದ ಒಂದು ವಾರದಿಂದ ಆರೋಪಿ ನೊಂದ ಬಾಲಕಿಯನ್ನು ಬಸ್ಸಿನಲ್ಲಿ ಹಿಂಬಾಲಿಸುತ್ತಿದ್ದು, ಮತ್ತೆ ಕಿರುಕುಳ ನೀಡಲು ಪ್ರಯತ್ನಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
Next Story





