ಡಿ.5ರಂದು ಮೂಳೂರು ಮರ್ಕಝ್ ಕ್ಯಾಂಪಸಿಗೆ ವಕ್ಫ್ ಬೋರ್ಡ್ ಅಧ್ಯಕ್ಷರ ಭೇಟಿ
ಉಡುಪಿ, ಡಿ.4: ರಾಜ್ಯ ವಕ್ಫ್ ಬೋರ್ಡ್ ನೂತನ ಅಧ್ಯಕ್ಷ ಎನ್.ಕೆ.ಎಂ. ಶಾಫಿ ಸಅದಿ ಡಿ.5ರಂದು ಮಧ್ಯಾಹ್ನ 2ಗಂಟೆಗೆ ಮೂಳೂರಿನ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮರ್ಕಝ್ ತಅ್ ಲೀಮಿಲ್ ಇಹ್ಸಾನ್ ವಿದ್ಯಾ ಸಮುಚ್ಛಯಕ್ಕೆ ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸ್ಸಯ್ಯಿದ್ ಕೆಎಸ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಲ್ ವಹಿಸಲಿರುವರು. ಡಿಕೆಯಸಿ, ಮರ್ಕಝ್ ಹಾಗೂ ಡಿಕೆಯಸ್ಸಿ ಅಧೀನ ಸಂಸ್ಥೆಗಳ ನೇತಾರರು ಮತ್ತು ಇನ್ನಿತರ ಗಣ್ಯ ವ್ಯಕ್ತಿಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ಸಂಸ್ಥೆಯ ಮ್ಯಾನೇಜರ್ ಯು.ಕೆ.ಮುಸ್ತಫಾ ಸಅದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





