ಸುಜಾತ ಶೇಟ್‌ಗೆ ಪಿಎಚ್‌ಡಿ

ಉಡುಪಿ, ಡಿ.4: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನಕೇಂದ್ರದ ಗಣಿತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಸುಜಾತ ಶೇಟ್ ಅವರು ಸುರತ್ಕಲ್‌ನ ಎನ್‌ಐಟಿಕೆಗೆ ಸಲ್ಲಿಸಿದ ‘ಎಫಿಶಿಯೆಂಟ್ ಡೋಮಿನೇಶನ್ ಇನ್ ಕರ್ಟೇಶಿಯನ್ ಪ್ರೊಡಕ್ಟ್ ಆಫ್ ಗ್ರಾಫ್ಸ್ ಆಂಡ್ ಇಟ್ಸ್ ಕ್ರಿಟಿಕಲ್ ಆಸ್ಪೆಕ್ಟ್ಸ್’ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ.
ಸುಜಾತ ಶೇಟ್ ಅವರು ಡಾ.ಎ.ಸೆಂಥಿಲ್ ತಿಲಕ್ ಹಾಗೂ ಪ್ರೊ. ಎಸ್. ಎಸ್.ಕಾಮತ್‌ರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಸಿದ್ಧಪಡಿಸಿದ್ದರು. ತಮಿಳುನಾಡಿನ ಭಾರತಿದಾಸನ್ ವಿವಿಯಲ್ಲಿ ಎಂಎಸ್ಸಿ ಪದವಿ ಪಡೆದ ಅವರು ಮಧುರೆ ಕಾಮರಾಜ ವಿವಿಯಿಂದ ಎಂಫಿಲ್ ಪದವಿ ಪಡೆದಿದ್ದರು.
Next Story





