ಆಲಿಂ ಅಖ್ತರ್, ಬಿಲಾಲ್ ತನ್ವೀರ್ಗೆ ಜಂಟಿಯಾಗಿ ಜಾವದ್ ಪ್ರಶಸ್ತಿ

Aalim Akhtar (left) and Bilal Tanweer (right). Photo: lums.edu.pk.
ಹೊಸದಿಲ್ಲಿ, ಡಿ.4: ಉರ್ದುವಿನಿಂದ ಇಂಗ್ಲಿಷ್ಗೆ ಅನುವಾದಕ್ಕಾಗಿ 2021ನೇ ಸಾಲಿನ ಜಾವದ್ ಸ್ಮಾರಕ ಪ್ರಶಸ್ತಿಯನ್ನು ಆಲಿಂ ಅಕ್ತರ್ ಅವರ ಝಕಿಯಾ ಮಶಹದಿಯವರ ‘ಹರಿ ಬೋಲ್’ನ ಅನುವಾದ ಮತ್ತು ಬಿಲಾಲ್ ತನ್ವೀರ್ ಅವರ ಬಿಲಾಲ್ ಹಸನ್ ಮಂಟೊರ ‘ಕೀಡಾ(ಪರಾವಲಂಬಿ)’ದ ಅನುವಾದ ಕೃತಿಗಳಿಗೆ ಜಂಟಿಯಾಗಿ ನೀಡಲಾಗಿದೆ.
ಕಳೆದ ವರ್ಷದಂತೆ ಈ ವರ್ಷವೂ ರನರ್ ಅಪ್ ಪ್ರಶಸ್ತಿಗಾಗಿ ಅನುವಾದ ಕೃತಿಗಳನ್ನು ಆಯ್ಕೆ ಮಾಡಲಾಗಿಲ್ಲ. ಆದಾಗ್ಯೂ,ನಾಝಿಯಾ ಅಖ್ತರ್ ಅವರ ‘ಛೋಟಮ್ ಜಾನ್’(ಮೂಲ ಲೇಖಕಿ ಝೀನತ್ ಸಾಜಿದಾ)ಮತ್ತು ಫಾತಿಮಾ ಎಂ ಅವರ ‘ಸಾಯೆ’(ಮೂಲ ಲೇಖಕ ಖಾಲಿದ್ ಜಾವೇದ್) ಅನುವಾದ ಕೃತಿಗಳಿಗೆ ಆಯ್ಕೆ ಸಮಿತಿಯು ಪ್ರಶಂಸೆಯನ್ನು ವ್ಯಕ್ತಪಡಿಸಿದೆ.
ಪದ್ಮಶ್ರೀ, ಘಾಲಿಬ್, ಮೀರ್ ಅನಿಸ್ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಉರ್ದು ಕವಿ ಹಾಗೂ ವಿದ್ವಾಂಸ ಅಲಿ ಜವಾದ್ ಝೈದಿಯವರ ಹೆಸರಿಲ್ಲಿ ಜವಾದ್ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 2016ರಲ್ಲಿ ಝೈದಿಯವರ ಜನ್ಮ ಶತಾಬ್ದಿಯ ಬೆನ್ನಲ್ಲೇ ಭಾಷೆಗಳು,ಸಂಸ್ಕೃತಿಗಳು ಮತ್ತು ಇತಿಹಾಸಗಳ ನಡುವೆ ಸೇತುವೆಯಾಗಿದ್ದ ಅವರ ಸಾಹಿತ್ಯ ಪರಂಪರೆಗೆ ಗೌರವವಾಗಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತು.