ಜಾಮಿಯಾ ಮಿಲ್ಲಿಯ ಇಸ್ಲಾಮಿಯಾದ ರುಬೀನಾ ಪ್ರಧಾನ ಮಂತ್ರಿ ರಿಸರ್ಚ್ ಫೆಲೋಶಿಪ್ ಗೆ ಆಯ್ಕೆ

ರುಬೀನಾ (Photo: Twitter/@Muslims_India)
ಹೊಸದಿಲ್ಲಿ: ಜಾಮಿಯಾ ಮಿಲ್ಲಿಯ ಇಸ್ಲಾಮಿಯಾದ(ಜೆಎಂಐ) ಪಿಎಚ್ ಡಿ ರಿಸರ್ಚ್ ಸ್ಕಾಲರ್ ರುಬೀನಾ ಅವರು ಪ್ರತಿಷ್ಠಿತ ಪ್ರಧಾನಮಂತ್ರಿ ರಿಸರ್ಚ್ ಫೆಲೋಶಿಪ್ ಗೆ(ಪಿಎಂಆರ್ ಎಫ್) ಆಯ್ಕೆಯಾಗಿದ್ದಾರೆ.
ಈ ಅವಾರ್ಡ್ ಗೆ ಪಾತ್ರರಾಗಿರುವ ಸ್ಕಾಲರ್ ರುಬೀನಾಗೆ ಜೆಎಂಯ ಉಪ ಕುಲಪತಿ ಪ್ರೊಫಸರ್ ನಜ್ಮಾ ಅಖ್ತರ್ ಅಭಿನಂದನೆ ಸಲ್ಲಿಸಿದ್ದಾರೆ. ಗುಣಮಟ್ಟದ ಸಂಶೋಧನೆಯ ಮೂಲಕ ಫೆಲೋಶಿಪ್ ಗೆ ರುಬೀನಾ ನ್ಯಾಯ ಒದಗಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಇಲೆಕ್ಟ್ರಾನಿಕಲ್ ಇಂಜಿನಿಯರಿಂಗ್ ವಿಭಾಗದ ಎಚ್ ಒಡಿ ಮುನ್ನಾ ಖಾನ್ ಅವರ ಪ್ರಕಾರ ರುಬೀನಾ ಅವರು ಮೊದಲ 2 ವರ್ಷ ತಿಂಗಳಿಗೆ 70,000 ರೂ. ತಿಂಗಳ ಫೆಲೋಶಿಪ್ ಸ್ವೀಕರಿಸಲಿದ್ದಾರೆ. ಮೂರನೇ ವರ್ಷಕ್ಕೆ 75,000 ರೂ. ಹಾಗೂ ಕ್ರಮವಾಗಿ 4ನೇ ಹಾಗೂ 5ನೇ ವರ್ಷ 80,000 ರೂ. ಫೆಲೋಶಿಪ್ ಪಡೆಯಲಿದ್ದಾರೆ.
ಇಷ್ಟೇ ಅಲ್ಲದೆ, ಯೋಜನೆಯಡಿ ಸ್ಕಾಲರ್ ರುಬೀನಾ ಪ್ರತಿ ವರ್ಷ 2 ಲಕ್ಷ ರೂ. ರಿಸರ್ಚ್ ಗ್ರ್ಯಾಂಟ್ ಗೂ(5 ವರ್ಷಕ್ಕೆ 10 ಲಕ್ಷ ರೂ.) ಅರ್ಹತೆ ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ.
Next Story





