ನಾಗಾಲ್ಯಾಂಡ್ ನಾಗರಿಕರ ಹತ್ಯೆಗೆ ವಿಷಾದ ವ್ಯಕ್ತಪಡಿಸಿದ ಭಾರತೀಯ ಸೇನೆ, ಉನ್ನತ ಮಟ್ಟದ ತನಿಖೆ ಭರವಸೆ

ಹೊಸದಿಲ್ಲಿ:ಮ್ಯಾನ್ಮಾರ್‌ನ ಗಡಿಯಲ್ಲಿರುವ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಹಲವಾರು ನಾಗರಿಕರ ಸಾವಿಗೆ ಇಂದು ತೀವ್ರ ವಿಷಾದ ವ್ಯಕ್ತಪಡಿಸಿದ ಭಾರತೀಯ ಸೇನೆಯು, ಈ ವಿಷಯವನ್ನು 'ಉನ್ನತ ಮಟ್ಟದಲ್ಲಿ'ತನಿಖೆ ನಡೆಸಲಾಗುವುದು ಎಂದು ಹೇಳಿದೆ.
ಘಟನೆಯಲ್ಲಿ 13 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕಾರ್ಯಾಚರಣೆಯಲ್ಲಿ ಓರ್ವ ಯೋಧ ಕೂಡ ಹುತಾತ್ಮರಾಗಿದ್ದಾರೆ ಎಂದು ಸೇನೆ ಖಚಿತಪಡಿಸಿದೆ.
ದಂಗೆಕೋರರ ಚಲನವಲನದ ಬಗ್ಗೆ ಸುಳಿವು ನೀಡಿದ ನಂತರ ಸೈನ್ಯವು ತಿರು-ಓಟಿಂಗ್ ರಸ್ತೆಯಲ್ಲಿ ಹೊಂಚುದಾಳಿಯನ್ನು ಯೋಜಿಸಿತ್ತು., ಆದರೆ ಅದು ನಾಗರಿಕರ ಹತ್ಯೆಗೆ ಕಾರಣವಾಗಿದೆ.
"ಘಟನೆ ಮತ್ತು ಅದರ ನಂತರದ ಘಟನೆಗಳಿಗೆ ತೀವ್ರ ವಿಷಾದವಿದೆ. ದುರದೃಷ್ಟಕರ ಜೀವಹಾನಿಗೆ ಕಾರಣವನ್ನುಹುಡುಕಲು ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದೆ ಮತ್ತು ಕಾನೂನಿನ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಸೇನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
"ಘಟನೆಯಲ್ಲಿ ಭದ್ರತಾ ಪಡೆಗಳು ತೀವ್ರವಾಗಿ ಗಾಯಗೊಂಡಿದ್ದು, ಒಬ್ಬ ಯೋಧ ಗಾಯಗೊಂಡು ಸಾವನ್ನಪ್ಪಿದ್ದಾರೆ" ಎಂದು ಸೇನೆ ತಿಳಿಸಿದೆ.
ಮೋನ್ ಪ್ರದೇಶವು ನಾಗಾ ಗುಂಪಿನ ಎನ್‌ಎಸ್‌ಸಿಎನ್(ಕೆ) ಹಾಗೂ ಉಲ್ಫಾದ ಭದ್ರಕೋಟೆಯಾಗಿದೆ ಮತ್ತು ಈ ಘಟನೆಯು ರಾಜ್ಯದ 'ಹಾರ್ನ್‌ಬಿಲ್ ಉತ್ಸವ' ಕ್ಕೆ ಮುಂಚಿತವಾಗಿ ನಡೆದಿದೆ. ಇದರಲ್ಲಿ ಹಲವಾರು ರಾಜತಾಂತ್ರಿಕರು ಭಾಗವಹಿಸಿದ್ದಾರೆ.







