ದಿಲ್ಲಿಯಲ್ಲಿ ಒಮೈಕ್ರಾನ್ ಪ್ರಕರಣ ಪತ್ತೆ

ಹೊಸದಿಲ್ಲಿ:ಭಾರತದ 5 ನೇ ಒಮೈಕ್ರಾನ್ ಪ್ರಕರಣವು ದಿಲ್ಲಿಯಲ್ಲಿ ಪತ್ತೆಯಾಗಿದ್ದು, ತಾಂಜಾನಿಯಾದಿಂದ ದಿಲ್ಲಿಗೆ ಆಗಮಿಸಿ ಲೋಕನಾಯಕ ಜೈ ಪ್ರಕಾಶ್ ಆಸ್ಪತ್ರೆಗೆ (ಎಲ್‌ಎನ್‌ಜೆಪಿ) ದಾಖಲಾಗಿದ್ದ ವ್ಯಕ್ತಿಯೊಬ್ಬರಲ್ಲಿ ರವಿವಾರ ಹೊಸ ಕೋವಿಡ್ ರೂಪಾಂತರವಾದ ಒಮೈಕ್ರಾನ್ ಕಂಡುಬಂದಿದೆ ಎಂದು NDTV ವರದಿ ಮಾಡಿದೆ.
ಕರ್ನಾಟಕದ ಬೆಂಗಳೂರಿನಲ್ಲಿ 2 ಒಮೈಕ್ರಾನ್ ಪ್ರಕರಣ, ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ತಲಾ ಒಂದು ಪ್ರಕರಣ ಈಗಾಗಲೇ ಪತ್ತೆಯಾಗಿದೆ.
ನವೆಂಬರ್ 25 ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಹೊಸ ರೂಪಾಂತರ ವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) 'ಕಳವಳದ ರೂಪಾಂತರ' ಎಂದು ವಿವರಿಸಿದೆ.
Next Story





