ಅಸ್ಸಾಂ: ʼಸಂಪಾದಕೀಯʼ ಬರೆದ ಪತ್ರಕರ್ತನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

Photo: Facebook
ಗುವಾಹಟಿ: ಪತ್ರಕರ್ತರೋರ್ವರು ತಾವು ನಡೆಸುತ್ತಿರುವ ಸುದ್ದಿ ವೆಬ್ ಸೈಟ್ ನಲ್ಲಿ ಸಂಪಾದಕೀಯ ಬರೆದಿದ್ದು, ಈ ಕುರಿತು ಇದೀಗ ಅಸ್ಸಾಂ ಪೊಲೀಸರು ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಬರಾಕ್ ಬುಲೆಟಿನ್ ಪೋರ್ಟಲ್ನ ಸಹ-ಮಾಲೀಕರಾಗಿರುವ ಅನಿರ್ಬನ್ ರಾಯ್ ಚೌಧರಿ ವಿರುದ್ಧ 124A (ದೇಶದ್ರೋಹ), 501 (ಮಾನಹಾನಿಕರ ಪ್ರಸಾರ) 153-A (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505-2 ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಸಿಲ್ಚಾರ್ ಮೂಲದ ಉದ್ಯಮಿ ಶಂತನು ಸೂತ್ರಧರ್ ಅವರು ಸಲ್ಲಿಸಿದ ಪ್ರಥಮ ಮಾಹಿತಿ ವರದಿಯ (ಎಫ್ಐಆರ್) ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಆಲ್ ಅಸ್ಸಾಂ ಬಂಗಾಳಿ ಹಿಂದೂ ಅಸೋಸಿಯೇಶನ್ನ ಸದಸ್ಯರೂ ಆಗಿರುವ ಸೂತ್ರಧರ್ ಅವರು ಡಿಸೆಂಬರ್ 2 ರಂದು ಎಫ್ಐಆರ್ ದಾಖಲಿಸಿದ್ದರು. ಸಿಲ್ಚಾರ್ ಸದರ್ ಪೊಲೀಸ್ ಠಾಣೆ ಒಂದು ದಿನದ ನಂತರ ಅದನ್ನು ಗಮನಿಸಿ ಡಿಸೆಂಬರ್ 6 ರಂದು ತನ್ನ ಮುಂದೆ ಹಾಜರಾಗುವಂತೆ ಚೌಧರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ವರದಿ ತಿಳಿಸಿದೆ.