ಕಾರಿನ ಮೇಲೆ ಗುಂಡಿನ ದಾಳಿ: ಉ.ಪ್ರ. ಆರ್‌ಎಲ್‌ಡಿ ಮುಖಂಡ ಹಾಜಿ ಯೂನುಸ್, ಸಹಚರರು ಗಂಭೀರ

ಲಕ್ನೋ: ಉತ್ತರಪ್ರದೇಶದ ಬಹುಜನ ಸಮಾಜ ಪಕ್ಷದ ಮಾಜಿ ಬ್ಲಾಕ್ ಪ್ರಮುಖ್ ಆಗಿದ್ದ ಹಾಜಿ ಯೂನುಸ್ ಆರ್‌ಎಲ್‌ಡಿ ಪಕ್ಷವನ್ನು ಸೇರಿದ ಬೆನ್ನಲ್ಲೇ ಅವರ ವಿರುದ್ಧ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಹಾಜಿ ಯೂನುಸ್ ಸಹಿತ ಅವರ ಜೊತೆಗಿದ್ದ ಮೂವರು ಸಹಚರರು ಗಂಭೀರ ಗಾಯಗೊಂಡಿದ್ದಾರೆ ಎಂದು ಪಂಜಾಬ್ ಕೇಸರಿ ವರದಿ ಮಾಡಿದೆ.
ಉತ್ತರಪ್ರದೇಶದ ಬುಲಂದ್ ಶಹರ್ ನಲ್ಲಿ ಘಟನೆ ನಡೆದಿದ್ದು, ಪವಾಡಸದೃಶವಾಗಿ ಘಟನೆಯಲ್ಲಿ ಯೂನುಸ್ ಪಾರಾಗಿದ್ದಾರೆ. ಆದರೆ, ಅವರ ಸಹಚರರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರದಿ ತಿಳಿಸಿದೆ. 40ಕ್ಕೂ ಹೆಚ್ಚು ಗುಂಡುಗಳನ್ನು ಕಾರಿನ ನೇರ ಸಿಡಿಸಿದ್ದಾರೆ ಎಂದು ತಿಳಿದು ಬಂದಿದೆ. ಹಾಜಿ ಯೂನುಸ್ ಈ ಹಿಂದೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
A day after former block pramukh and BSP leader Haji Yunus joined RLD, in UP's Bulandshahr sharpshooters fire indiscriminately at his motorcade four receive bullets, 3 critical. @Uppolice pic.twitter.com/r0eRLAuuN3
— Sandeep Rai (@RaiSandeepTOI) December 5, 2021