ಮಂಗಳೂರು ಕಾರಾಗೃಹಕ್ಕೆ ಟಿ.ಬಿ.ಓಬಳೇಶಪ್ಪ ನೂತನ ಅಧೀಕ್ಷಕ
ಮಂಗಳೂರು, ಡಿ.5: ಮಂಗಳೂರು ಕಾರಾಗೃಹದ ನೂತನ ಅಧೀಕ್ಷಕರಾಗಿ ಟಿ.ಬಿ.ಓಬಳೇಶಪ್ಪ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈವರೆಗೆ ಸಹಾಯಕ ಅಧೀಕ್ಷಕ ಚಂದನ್ ಜೆ.ಪಟೇಲ್ ಪ್ರಭಾರ ಅಧೀಕ್ಷಕರ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಕೆಲವು ವರ್ಷದ ಹಿಂದೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಸಹಾಯಕ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಟಿ.ಬಿ.ಓಬಳೇಶಪ್ಪ ಇದೀಗ ಭಡ್ತಿ ಪಡೆದು ಮಂಗಳೂರಿಗೆ ನಿಯುಕ್ತಿಗೊಂಡಿದ್ದಾರೆ.
Next Story





