ಗುಜರಾತ್:ಜೂಜು ಅಡ್ಡೆ ನಡೆಸುತ್ತಿದ್ದ ಮಾಜಿ ರಣಜಿ ಕ್ರಿಕೆಟಿಗನ ಬಂಧನ

ಅಹಮದಾಬಾದ್: ಬನಸ್ಕಾಂತದ ಪಾಲನ್‌ಪುರದಲ್ಲಿರುವ ಪೊಲೀಸ್ ಪ್ರಧಾನ ಕಛೇರಿಯಿಂದ ಕೆಲವೇ ನೂರು ಮೀಟರ್‌ಗಳ ದೂರದಲ್ಲಿರುವ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜೂಜಿನ ಅಡ್ಡೆಯನ್ನು ನಡೆಸುತ್ತಿದ್ದ ಆರೋಪದ ಮೇಲೆ ಮಾಜಿ ರಣಜಿ ಮಟ್ಟದ ಕ್ರಿಕೆಟಿಗನೊಬ್ಬನನ್ನು ಬಂಧಿಸಲಾಗಿದೆ ಎಂದು Indian express ವರದಿ ಮಾಡಿದೆ.
ರಣಜಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಗುಜರಾತ್ ತಂಡದಲ್ಲಿದ್ದ ಮಾಜಿ ಕ್ರಿಕೆಟಿಗ, ಪಾಲನ್‌ಪುರ ನಿವಾಸಿ ದಿಲೀಪ್‌ಸಿನ್ಹ ಹದಿಯೋಲ್ ಹಾಗೂ ಇತರ 39 ಮಂದಿಯನ್ನು ಕಿಂಗ್ ಜಾರ್ಜ್ ಫಿಫ್ತ್ ಕ್ಲಬ್‌ನಿಂದ ಬಂಧಿಸಲಾಗಿದೆ. ಹದಿಯೋಲ್ ಸ್ಪೋರ್ಟ್ ಕ್ಲಬ್ ನ ಟ್ರಸ್ಟಿಗಳಲ್ಲಿ ಒಬ್ಬರು.
ಪೊಲೀಸರ ಪ್ರಕಾರ ಡಿಸೆಂಬರ್ 2 ರಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಡಿಯಲ್ಲಿ ರಾಜ್ಯ ಮಾನಿಟರಿಂಗ್ ಸೆಲ್ (ಎಸ್‌ಎಂಸಿ) ದಾಳಿ ನಡೆಸಿತು.
Next Story