ಇರಾಕ್: ಕುರ್ಡಿಷ್ ಪ್ರಾಂತದಲ್ಲಿ ಐಸಿಸ್ ದಾಳಿ; 4 ಯೋಧರ ಹತ್ಯೆ
ಬಗ್ದಾದ್, ಡಿ.6: ಕುರ್ಡಿಷ್ ಸ್ವಾಯತ್ತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇರಾಕ್ ಸಶಸ್ತ್ರ ಪಡೆಯ ಮೇಲೆ ಐಸಿಸ್ ಉಗ್ರರು ನಡೆಸಿದ ದಾಳಿಯಲ್ಲಿ 4 ಯೋಧರು ಮೃತಪಟ್ಟಿದ್ದು ಇತರ 5 ಯೋಧರು ಗಾಯಗೊಂಡಿರುವುದಾಗಿ ಇರಾಕ್ನ ಅಧಿಕಾರಿಗಳು ಹೇಳಿದ್ದಾರೆ. ಇದು ಕಳೆದ 2 ವಾರದಲ್ಲಿ ನಡೆದ 3ನೇ ದಾಳಿ ಪ್ರಕರಣವಾಗಿದೆ. ದಾಳಿಯನ್ನು ಕುರ್ಡಿಶ್ ಸೇನೆಯೂ ದೃಢಪಡಿಸಿದೆ. 2014ರಲ್ಲಿ ಐಸಿಸ್ ಇರಾಕ್ನ ಕೆಲ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿತ್ತು. ಬಳಿಕ ಅಮೆರಿಕ ನೇತೃತ್ವದ ಮೈತ್ರಿಪಡೆ ಐಸಿಸ್ ಪಡೆಯನ್ನು ಹಿಮ್ಮೆಟ್ಟಿಸಿತ್ತು. ಅಂದಿನಿಂದ ಇರಾಕ್ನ ಉತ್ತರ ಭಾಗದಲ್ಲಿ ಐಸಿಸ್ ನಿರಂತರ ದಾಳಿ ನಡೆಸುತ್ತಿದೆ.
Next Story