ಗೋರಖ್ಪುರ: ಮೂರು ಬೃಹತ್ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

Twitter/BJP
ಲಕ್ನೊ: ಮುಖ್ಯಮಂತ್ರಿ ಆದಿತ್ಯನಾಥ್ ಅವರ ತವರು ಕ್ಷೇತ್ರವಾಗಿರುವ ಪೂರ್ವ ಉತ್ತರ ಪ್ರದೇಶದ ಗೋರಖ್ಪುರದಲ್ಲಿ 10,000 ಕೋಟಿ ರೂಪಾಯಿ ಮೌಲ್ಯದ ಮೂರು ಬೃಹತ್ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದರು.
ರೂ. 8,603 ಕೋಟಿ ಮೌಲ್ಯದ ರಸಗೊಬ್ಬರ ಕಾರ್ಖಾನೆ, ರೂ. 1,011 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ರೀಜನಲ್ ಮೆಡಿಕಲ್ ರಿಸರ್ಚ್ ಸೆಂಟರ್ (ಐಸಿಎಂಆರ್–ಆರ್ ಎಂಆರ್ ಸಿ ) ನ ಹೈಟೆಕ್ ಲ್ಯಾಬ್ ಈ ಯೋಜನೆಗಳಲ್ಲಿ ಸೇರಿವೆ.
"ನವ ಭಾರತವನ್ನು ನಿರ್ಧರಿಸಿದಾಗ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಇಂದು ಗೋರಖ್ಪುರದ ಕಾರ್ಯಕ್ರಮ ಸಾಕ್ಷಿಯಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು,
ಸಮಾಜವಾದಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಮೋದಿ, "ಕೆಂಪು ಟೋಪಿಗಳು (ಸಮಾಜವಾದಿ ಪಕ್ಷ) ಕೇವಲ 'ಕೆಂಪು ದೀಪ'ಗಳ ಬಗ್ಗೆ ಕಾಳಜಿ ವಹಿಸುತ್ತವೆ ಎಂದು ಇಂದು ಇಡೀ ಉತ್ತರಪ್ರದೇಶಕ್ಕೆ ತಿಳಿದಿದೆ. 'ಕೆಂಪು ಟೋಪಿಗಳು' ಯುಪಿಗೆ ಕೆಂಪು ಎಚ್ಚರಿಕೆ ಎಂದು ಯಾವಾಗಲೂ ನೆನಪಿಡಿ . ಅವು ಅಪಾಯದ ಗಂಟೆ ಎಂದರು.