ಸತತ 9ನೇ ಬಾರಿ ರೆಪೊ ದರ ಯಥಾಸ್ಥಿತಿಯಲ್ಲಿಟ್ಟ ಆರ್‌ಬಿಐ

ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಆರು ಸದಸ್ಯರ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಪಾಲಿಸಿ ರೆಪೊ ದರವನ್ನು ಶೇಕಡಾ 4 ರಷ್ಟು ಯಥಾಸ್ಥಿತಿಯಲ್ಲಿ ಇರಿಸಲು ಸರ್ವಾನುಮತದಿಂದ ಮತ ಚಲಾಯಿಸಿದೆ ಎಂದು ಬುಧವಾರ ಘೋಷಿಸಿದರು. ರೆಪೊ ದರವು ಸತತ ಒಂಬತ್ತನೇ ಬಾರಿಗೆ ಬದಲಾಗದೆ ಉಳಿದಿದೆ.
ರಿವರ್ಸ್ ರೆಪೊ ದರ ಕೂಡ ಶೇ 3.35 ರಲ್ಲೂ ಬದಲಾಗದೆ ಉಳಿದಿದೆ ಎಂದು ಎಂಪಿಸಿ ಸಭೆಯ ನಂತರ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಎಂಪಿಸಿ ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್ ಎಫ್) ದರ ಹಾಗೂ ಬ್ಯಾಂಕ್ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಈ ದರಗಳು ಶೇಕಡಾ 4.25 ರಷ್ಟಿವೆ.
Next Story