Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಿದ್ದಲ್ಲೇ ಬೇರೂರಿದ ಕೆಂಪಮ್ಮ...

ಬಿದ್ದಲ್ಲೇ ಬೇರೂರಿದ ಕೆಂಪಮ್ಮ ಅನ್ನಪೂರ್ಣೆಯಾಗಿದ್ದು...

ಗಿರೀಶ್ ಕೋಟೆಗಿರೀಶ್ ಕೋಟೆ8 Dec 2021 11:29 AM IST
share

ಬದುಕುವುದನ್ನು ಕಲಿಯಿರಿ ಎಂದು ಈಕೆ ಮಣ ಗಾತ್ರದ ಪುಸ್ತಕ ಬರೆಯಲಿಲ್ಲ. ಆಶ್ರಮ ಕಟ್ಟಿ ಫೀಸು ಕೇಳಲಿಲ್ಲ. ಬಿದ್ದಲ್ಲೇ ಬೇರೂರಿ ಹತ್ತಾರು ಮಂದಿಯ ಬದುಕಿಗೆ ಆಸರೆಯಾಗಿ ಲಕ್ಷಾಂತರ ಮಂದಿಯ ಹಸಿವಿಗೆ ಅನ್ನ ಆದವರು ಈ ಕೆಂಪಮ್ಮ. ತಾನೂ ಬದುಕಿ ತನ್ನಂತೆಯೇ ಹಲವರನ್ನು ಬದುಕಿಸಿದ ಕೆಂಪಮ್ಮರಿಗೆ ವಿಧಾನಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್, ಕೋರ್ಟುಗಳಲ್ಲಿ ಅಧಿಕಾರಿಗಳು, ಮಂತ್ರಿಗಳು, ವಕೀಲರು, ಪೊಲೀಸರು ಅನ್ನಪೂರ್ಣೆ ಅಂತಲೇ ಕರೆಯೋದು. ಮಧ್ಯಾಹ್ನ 12 ಗಂಟೆಯಿಂದ ವಿಧಾನಸೌಧ, ವಿಕಾಸಸೌಧ ಮತ್ತು ಎದುರಿನ ಹತ್ತಾರು ಕಚೇರಿಗಳು ಹಾಗೂ ಹೈಕೋರ್ಟ್ ಮತ್ತು ಸೆಷನ್ ಕೋರ್ಟ್ ಗಳಿಂದ ದೊಡ್ಡ ದೊಡ್ಡ ಖಾಲಿ ಕ್ಯಾರಿಯರ್‌ಗಳು ಮೊವಣಿಗೆ ಹೊರಡುತ್ತವೆ. ಇವೆಲ್ಲಾ ಬಂದು ಜಮೆ ಆಗುವುದು ಲೋಕೋಪಯೋಗಿ ಇಲಾಖೆಯ ಆವರಣದ ಇಂಜಿನಿಯರ್ಸ್ ಅಸೋಸಿಯೇಷನ್ ಕಟ್ಟಡದ ಪಕ್ಕದ ಖಾಲಿ ಜಾಗದಲ್ಲಿ. ಅಷ್ಟೊತ್ತಿಗಾಗಲೇ ಅಲ್ಲಿ ಸಾವಿರಾರು ಮಂದಿ ಅಧಿಕಾರಿಗಳು, ಪೊಲೀಸರು, ವಕೀಲರು ಮತ್ತು ಕೂಲಿಗಳು, ಕಾಸಿಲ್ಲದ ಮಾಸಿದ ಬಟ್ಟೆಯವರು, ಮಂಗಳಮುಖಿಯರು ಸಾಲು ಗಟ್ಟಿರುತ್ತಾರೆ.

ಬಿಸಿ ಬಿಸಿ ಮುದ್ದೆ, ಸೊಪ್ಪು, ಕಾಳಿನ ಸಾರು, ಹುರುಳಿಕಾಳಿನ ಹಪ್ಪ, ಹೋಳಿಗೆ, ವಡೆ, ಬೋಂಡಾ, ಬಜ್ಜಿ, ಪಲ್ಯ, ಮೂರು ರೀತಿಯ ಅನ್ನದ ಐಟಂ ಜತೆಗೆ ತರಹೇವಾರಿ ಐಟಂಗಳು ಸಾಲು ಗಟ್ಟಿದವರ ಕೈಯಲ್ಲಿ ಹಿಡಿದ ತಟ್ಟೆಗಳಲ್ಲಿ ಜಾಗ ಮಾಡಿಕೊಂಡಿರುತ್ತವೆ. ಪೌಷ್ಠಿಕಾಂಶ ತುಂಬಿದ, ಸೋಡಾ ಬೆರೆಸದ ಹೊಟ್ಟೆ ತುಂಬ ಊಟಕ್ಕೆ ಬರೀ 35-40 ರೂಪಾಯಿ. ಬೆಂಗಳೂರಿನ ಹೋಟೆಲ್- ದರ್ಶಿನಿಗಳಿಂದ ಮೊಳಕೆ ಕಾಳುಗಳು, ತರಕಾರಿ, ಸೊಗಸಾದ ಸೊಪ್ಪಿನ ಪಲ್ಯಗಳೆಲ್ಲಾ ನಾಪತ್ತೆಯಾಗಿ ವರ್ಷಗಳೇ ಕಳೆದಿವೆ. ಆದರೆ ಎಲ್ಲವೂ ಒಂದೇ ಕಡೆ ರುಚಿಕಟ್ಟಾಗಿ ಸಿಗುವುದು ಈ ಕೆಂಪಮ್ಮನ ಅನ್ನಪೂರ್ಣ ಕ್ಯಾಂಟೀನ್‌ನಲ್ಲಿ.

ಈ ಕೆಂಪಮ್ಮನ ಕೈ ರುಚಿಯ ಕಮಾಲು ಏನು ಗೊತ್ತಾ? ವಿಧಾನಸೌಧದ ಐಎಎಸ್, ಕೆಎಎಸ್ ಅಧಿಕಾರಿಗಳು, ನಾನಾ ಇಲಾಖೆಯ ಉನ್ನತ ಹಂತದ ಅಧಿಕಾರಿಗಳು ಮತ್ತು ಅದೇ ಇಲಾಖೆಯ ಡಿ ಗ್ರೂಪ್ ನೌಕರರವರೆಗೂ ಎಲ್ಲರೂ ಸ್ಥಾನಮಾನದ ಹುಸಿ ಹಂಗು ತೊರೆದು ಬೆರಳು ಚಪ್ಪರಿಸಿ ಊಟ ಮಾಡುವಂತೆ ಮಾಡಿರುವುದು. ಮುಖ್ಯ ವಿಷಯ ಇದಲ್ಲ. ಅನ್ನ ಹುಡುಕಿಕೊಂಡು ರಾಜಧಾನಿ ಬೆಂಗಳೂರಿಗೆ ಬಂದು ಬೀದಿಗೆ ಬೀಳುವವರು ಹಲವರು. ಆದರೆ ಬಿದ್ದಲ್ಲೇ ಬೇರೂರಿ ಅನ್ನ ಹುಟ್ಟಿಸಿಕೊಂಡು ತನ್ನಂತೆಯೇ ಹಲವರ ಅನ್ನಕ್ಕೆ ದಾರಿ ಆಗುವವರು ಕೆಲವರು. ಕೆಂಪಮ್ಮ ಈ ಕೆಲವರ ಸಾಲಿಗೆ ಸೇರುತ್ತಾರೆ. ಇಪ್ಪತ್ತು ವರ್ಷಗಳ ಹಿಂದೆ ಮರದ ಕೆಳಗೆ ತಳ್ಳುವ ಗಾಡಿಯಲ್ಲಿ ಮುದ್ದೆ ತಿರುವುತ್ತಾ 2 ರೂಪಾಯಿಗೆ ಊಟ ಮಾರಾಟ ಮಾಡುತ್ತಿದ್ದ ಕೆಂಪಮ್ಮ ಹತ್ತಾರು ಮಂದಿಗೆ ಊಟ ಮಾರಿ ತಾವು ಉಪವಾಸ ಮಲಗಿದ್ದಿದೆ. ಆದರೆ ಬದುಕುವ ಹಠ, ಕೆಲಸದ ಶ್ರದ್ದೆಯನ್ನು ಕೈ ಬಿಡಲಿಲ್ಲ. ಹಲವರು ಕೊಡುತ್ತಿದ್ದ ನಿತ್ಯ ಕಾಟದಿಂದಲೂ ಎದೆಗುಂದಲಿಲ್ಲ. ಕೆಂಪಮ್ಮನ ಕೈ ರುಚಿ ಉಂಡ ಒಂದಿಬ್ಬರು ಪುಣ್ಯಾತ್ಮರು ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಖಾಲಿ ಜಾಗ ಕೊಡಿಸಿ ಅನ್ನದ ಋಣ ತೀರಿಸಿದರು. ಆ ಜಾಗಕ್ಕೆ ತಗಡು ಶೀಟ್‌ಗಳನ್ನು ಅಂಟಿಸಿ ಅದೇ ಜಾಗದಲ್ಲಿ ನಿತ್ಯ ಸಾವಿರಾರು ಮಂದಿಗೆ ಊಟ ಕೊಡುತ್ತಿದ್ದಾರೆ ಕೆಂಪಮ್ಮ. ಅತ್ಯಂತ ಉನ್ನತ ಸ್ಥಾನದಲ್ಲಿರುವವರಿಂದ ಹಿಡಿದು, ಸಾಮಾನ್ಯ ವರ್ಗದವರೂ ಒಂದೇ ಕಡೆ ನಿಲ್ಲುವಂತೆ ಮಾಡಿದ ಅನ್ನಪೂರ್ಣ ಕ್ಯಾಂಟೀನ್‌ನಲ್ಲಿ ಒಟ್ಟು 36 ಮಂದಿ ಕೆಲಸ ಮಾಡುತ್ತಾರೆ. ಇವರೆಲ್ಲರ ಸಂಸಾರಗಳೂ ತಗಡಿನ ಶೀಟ್‌ಗಳ ಅಡಿಯಲ್ಲೇ ಬೇರು ಬಿಟ್ಟಿವೆ.

ಹಸಿವು ಮತ್ತು ಖಾಲಿ ಹೊಟ್ಟೆಯ ಸಂಕಟವನ್ನೇ ವರ್ಷಗಟ್ಟಲೆ ಅನುಭವಿಸಿದ್ದ ಕೆಂಪಮ್ಮನ ಹೋಟೆಲ್‌ನಲ್ಲಿ ಕಾಸಿಲ್ಲ ಎಂದು ದಾಸೋಹ ಸ್ವೀಕರಿಸಿ ಹೋಗುವವರು ಇರುವ ರೀತಿಯಲ್ಲೇ ಊಟ ಮಾಡಿ ಕಾಸು ಕೊಡದೆ ವಂಚಿಸುವ ಅನುಕೂಲವಂತರೂ ಕಾಣಿಸುತ್ತಾರೆ. ಇವರು ಕಣ್ಣು ಮುಚ್ಚಿಕೊಂಡು ಹಾಲು ಕುಡಿವ ಬೆಕ್ಕುಗಳಂತೆ. ಆದರೆ ಕೆಂಪಮ್ಮನ ಗರಡಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ವಂಚಕರು ಯಾರು ಎನ್ನುವುದು ಗೊತ್ತಿರುತ್ತದೆ. ಆದರೂ ಗೊತ್ತಿಲ್ಲದವರಂತೆ ಮತ್ತೆ ಮತ್ತೆ ಅವರ ತಟ್ಟೆಗೆ ಬಡಿಸುತ್ತಾರೆ. ಹೀಗಾಗಿ ಅನ್ನಪೂರ್ಣೆ ಕೆಂಪಮ್ಮನ ಕ್ಯಾಂಟೀನ್ ಒಂದು ರೀತಿ ಅನ್ನ ದಾಸೋಹದ ತಾಣ ಆಗಿದೆ. ಆ ಕಡೆ ಹೋದಾಗ ನೀವೂ ಒಮ್ಮೆ ಬೆರಳು ಚಪ್ಪರಿಸಿ ಬನ್ನಿ.

share
ಗಿರೀಶ್ ಕೋಟೆ
ಗಿರೀಶ್ ಕೋಟೆ
Next Story
X