ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ಕರಡು ಪಟ್ಟಿ ಪ್ರಕಟ

ಬೆಂಗಳೂರು, ಡಿ. 8: ಕರ್ನಾಟಕ ವಾಯುವ್ಯ, ದಕ್ಷಿಣ ಪದವೀಧರರ ಕ್ಷೇತ್ರ, ವಾಯವ್ಯ ಶಿಕ್ಷಕರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಗಳ ಕರುಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಡಿ.27ರ ಒಳಗೆ ಪಟ್ಟಿಯಲ್ಲಿ ಹೆಸರು ಇಲ್ಲವಾದಲ್ಲಿ ಅಥವಾ ಬದಲಾವಣೆ ಅವಶ್ಯಕತೆ ಇದ್ದಲ್ಲಿ ಮತದಾರರ ನೋಂದಣಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕೋರಲಾಗಿದೆ.
ಬುಧವಾರ ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾಇಲಾಖೆ ಜಂಟಿ ಮುಖ್ಯ ಚುನಾವಣಾಧಿಕಾರಿ ಡಿ.ಶಂಭು ಭಟ್ ಪ್ರಕಟಣೆ ಹೊರಡಿಸಿದ್ದು ವಾಯವ್ಯ ಪದವೀಧರರ ಕ್ಷೇತ್ರ ಒಟ್ಟು 50,807 ಮತದಾರರಿದ್ದಾರೆ. ದಕ್ಷಿಣ ಪದವೀಧರರ ಕ್ಷೇತ್ರ-1,08,090 ಮಂದಿ, ವಾಯುವ್ಯ ಶಿಕ್ಷಕರ ಕ್ಷೇತ್ರ-14,359 ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರ-12,607 ಮಂದಿ ಮತದಾರರಿದ್ದಾರೆ ಎಂದು ತಿಳಿಸಲಾಗಿದೆ.
Next Story





