ಸ್ಥಗಿತಗೊಂಡಿದ್ದ ಕೆಸ್ಸಾರ್ಟಿಸಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ

ಬೆಂಗಳೂರು, ಡಿ.8: ಕೋವಿಡ್-19ನಿಂದ ಸ್ಥಗಿತಗೊಂಡಿದ್ದ ಕೆಸ್ಸಾರ್ಟಿಸಿ ನೇಮಕಾತಿ ಪ್ರಕ್ರಿಯೆಯನ್ನು ಸರಕಾರದ ಅನುಮತಿ ಪಡೆದುಕೊಂಡು ಮುಂದುವರೆಸುವುದಾಗಿ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೆಸ್ಸಾರ್ಟಿಸಿ ನಿಗಮದಿಂದ ಹೊರಡಿಸಿದ ಜಾಹೀರಾತು ಸಂಖ್ಯೆ 1/2018ರ ಅನ್ವಯ 726 ತಾಂತ್ರಿಕ ಸಹಾಯಕ ಮತ್ತು 200 ಕರಾಸಾ ಪೇದೆ ಹುದ್ದೆಗಳಿಗೆ ಹಾಗೂ ಜಾಹೀರಾತು ಸಂ.1/2020 ಅನ್ವಯ 3745 ಚಾಲನಾ ಸಿಬ್ಬಂದಿ ನೇರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಸಹಜ ಸ್ಥಿತಿಯತ್ತ ಬಂದಿರುವ ಕಾರಣ ನೇಮಕಾತಿಯನ್ನು ಮುಂದುವರಿಸುವುದಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





