ಭಾವಿ ಪರ್ಯಾಯ ಕೃಷ್ಣಾಪುರ ಮಠದ ಭತ್ತ ಮುಹೂರ್ತ ಸಂಪನ್ನ

ಉಡುಪಿ, ಡಿ.8: ಭಾವಿ ಪರ್ಯಾಯ ಕೃಷ್ಣಾಪುರ ಮಠದ ಭತ್ತ ಮುಹೂರ್ತವು ಇಂದು ಸಂಪನ್ನಗೊಂಡಿತು.
ಕೃಷ್ಣಾಪುರ ಮಠದಲ್ಲಿ ನವಗ್ರಹ ಪೂಜೆಯೊಂದಿಗೆ ಮೂಹೂರ್ತ ಆರಂಭ ಗೊಂಡಿದ್ದು, ಬಳಿಕ ತಲೆ ಮೇಲೆ ಅಕ್ಕಿ ಮುಡಿ ಹೊತ್ತು ಕೊಂಡು ರಥಬೀದಿ ಯಲ್ಲಿರುವ ಚಂದ್ರಮೌಳೇಶ್ವರ, ಅನಂತೇಶ್ವರ, ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಪ್ರಾರ್ಥಿನೆ ನಡೆಸಲಾಯಿತು. ತದನಂತರ ಅಕ್ಕಿ ಮುಡಿಗಳನ್ನು ಕೃಷ್ಣ ಮಠದ ಬಡಗುಮಾಳಿಗೆಯಲ್ಲಿ ತಂದಿರಿಸಲಾಯಿತು.
ಭತ್ತ ಮೂಹೂರ್ತದ ನಂತರ ಗೋಶಾಲೆಯ ಹಿಂಭಾಗದಲ್ಲಿ ನಿರ್ಮಿಸಿದ ಕಟ್ಟಿಗೆ ರಥಕ್ಕೆ ಶಿಖರವನ್ನಿಡಲಾಯಿತು. ಮಠದ ಪುರೋಹಿತರಾದ ವೇದಮೂರ್ತಿ ನಿವಾಸ ಉಪಾಧ್ಯಾಯ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಠದ ಶ್ರೀನಿವಾಸ ಭಟ್ ಪಡುಬಿದ್ರೆ, ವರದ ರಾವ್, ಸೀತಾರಾಮ ಭಟ್, ಕೊಟ್ಟಾರಿಗಳಾದ ರಾಘವೇಂದ್ರ ರಾವ್, ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀನಾರಯಣ ಅಸ್ರಣ್ಣ, ಪ್ರಮುಖ ರಾದ ಹರಿಕೃಷ್ಣ ಪುನರೂರು, ಭುವನಾಭಿ ರಾಮ ಉಡುಪ, ಶ್ರೀಪತಿ ಭಟ್ ಮೂಡುಬಿದ್ರೆ, ಬಾಲಾಜಿ ರಾಘವೇಂದ್ರ ಆಚಾರ್ಯ, ವಿದ್ವಾಂಸರಾದ ಹರಿದಾಸ ಭಟ್, ಶಿವಪ್ರಸಾದ್ ತಂತ್ರಿ, ಪದ್ಮನಾಭ ಭಟ್ ಕಿದಿಯೂರು, ಶಾಸಕ ಹಾಗೂ ಪರ್ಯಾಯೋತ್ಸವ ಸಮಿತಿಯ ಅಧ್ಯಕ್ಷ ರಘುಪತಿ ಭಟ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಸಮಿತಿಯ ಶ್ರೀಶ ಆಚಾರ್ಯ, ರಾಘವೇಂದ್ರ ರಾವ್, ಲಕ್ಷ್ಮೀನಾರಾಯಣ್, ಜಯಪ್ರಕಾಶ್ ಕೆದ್ಲಾಯ, ಪ್ರಧಾನ ಕಾರ್ಯ ದರ್ಶಿ ವಿಷ್ಣು ್ರಸಾದ್ ಪಾಡಿಗಾರು ಉಪಸ್ಥಿತರಿದ್ದರು.







