ಮಹಿಳೆಯ ಕಿವಿಯ ಬೆಂಡೋಲೆ ಸುಲಿಗೆ
ಕುಂದಾಪುರ, ಡಿ.8: ಮೀನು ತರಲು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕಿವಿಯ ಚಿನ್ನದ ಬೆಂಡೋಲೆಯನ್ನು ವ್ಯಕ್ತಿಯೊಬ್ಬ ಕಳವು ಮಾಡಿ ಕೊಂಡು ಹೋಗಿರುವ ಘಟನೆ ಡಿ.7ರಂದು ಬೆಳಗ್ಗೆ ಬಸ್ರೂರು ಗ್ರಾಮದ ನಿವೇದಿತ ಶಾಲೆಯ ಬಳಿ ನಡೆದಿದೆ.
ಬಸ್ರೂರು ಬಾಳೆಹಿತ್ಲುವಿನ ಕರಿಯಮ್ಮ(75) ಎಂಬವರು ಮೀನು ತರಲೆಂದು ನಡೆದುಕೊಂಡು ಹೋಗುತ್ತಿದ್ದಾಗ ಅವರ ಪರಿಚಯದ ಬಸ್ರೂರಿನ ಮಧುಕರ ಮೊಗವೀರ ಎಂಬಾತ ಹಿಂದಿನಿಂದ ಬಂದು ನೆಲಕ್ಕೆ ದೂಡಿ ಮುಖಕ್ಕೆ ಗುದ್ದಿ ಕಿವಿಯಲ್ಲಿ ಧರಿಸಿದ ಚಿನ್ನದ ಬೆಂಡೋಲೆಯನ್ನು ಕಿವಿಯಿಂದ ಹರಿದು ತೆಗೆದು ಕೊಂಡು ಪರಾರಿಯಾಗಿದ್ದಾನೆ. ಇದರಿಂದ ಕರಿಯಮ್ಮ ಅವರ ಕಿವಿಗೆ ರಕ್ತಗಾಯವಾಗಿದ್ದು ಕಳವು ಮಾಡಿದ ಬೆಂಡೋಲೆ ಮೌಲ್ಯ 12000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





