ಕಾರು ಢಿಕ್ಕಿ : ಪಾದಚಾರಿ ಮೃತ್ಯು
ಕೋಟ, ಡಿ.8: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ವಿಭಜಕದ ಅಂಚಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತೆಕ್ಕಟ್ಟೆ ಗ್ರಾಮದ ಅಪ್ಪು ನಾಯಕ್‌ರ ಮಿಲ್ ಹತ್ತಿರ ರಾ.ಹೆ. 66ರಲ್ಲಿ ಡಿ.7ರಂದು ರಾತ್ರಿ 8.30ರ ಸುಮಾರಿಗೆ ನಡೆದಿದೆ.
ಮೃತರನ್ನು ತೆಕ್ಕಟ್ಟೆಯ ಸದಾಶಿವ ಶೆಟ್ಟಿ(64) ಎಂದು ಗುರುತಿಸಲಾಗಿದೆ. ಇವರು ರಸ್ತೆ ವಿಭಾಜಕದ ಅಂಚಿನಲ್ಲಿ ನಿಂತುಕೊಂಡಿರು ವಾಗ ತೆಕ್ಕಟ್ಟೆ ಕಡೆಯಿಂದ ಕೋಟ ಕಡೆಗೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆಯಿತು. ಇದರಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಇವರು, ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





