ಎಪಿಡಿ ಪ್ರತಿಷ್ಠಾನ, ಹಸಿರು ದಳದ ಸೇವೆಯಿಂದ ತ್ಯಾಜ್ಯ ಹೆಕ್ಕುವವರಿಗೆ ಆಧಾರ್ ಕಾರ್ಡ್ ಶಿಬಿರ

ಮಂಗಳೂರು, ಡಿ.8: ಆ್ಯಂಟಿ ಪೋಲ್ಯೂಷನ್ ಡ್ರೈವ್ ಫೌಂಡೇಶನ್ (ಎಪಿಡಿ ಪ್ರತಿಷ್ಠಾನ)ವು ಹಸಿರು ದಳದ ಸಹಯೋಗದೊಂದಿಗೆ ಮತ್ತು ದ.ಕ. ಜಿಲ್ಲಾಡಳಿತದ ಸಹಕಾರದಲ್ಲಿ ನಗರದ ಬಸವಲಿಂಗಪ್ಪನಗರ ಕಾಲನಿಯತ್ಯಾಜ್ಯ ಹೆಕ್ಕುವವರಿಗಾಗಿ ಆಧಾರ್ ಕಾರ್ಡ್ ಶಿಬಿರವನ್ನು ಇತ್ತೀಚೆಗೆ ಆಯೋಜಿಸಿತು.
ಈ ಶಿಬಿರದಲ್ಲಿ 64 ಕಸ ಹೆಕ್ಕುವವರು ಪಾಲ್ಗೊಂಡರು. 30 ತ್ಯಾಜ್ಯ ಹೆಕ್ಕುವವರ ಮೊಬೈಲ್ ಸಂಖ್ಯೆಗಳ ಬದಲಾವಣೆ, 8 ಮಂದಿಯ ವಿಳಾಸ ಬದಲಾವಣೆ ಮತ್ತು 12 ನವೀಕರಣ ಸೇರಿದಂತೆ 60 ಮಂದಿ ತ್ಯಾಜ್ಯ ಹೆಕ್ಕುವವರ ಅಸ್ತಿತ್ವದಲ್ಲಿರುವ ಆಧಾರ್ ಕಾರ್ಡ್ ಗಳನ್ನು ಅಗತ್ಯ ತಿದ್ದುಪಡಿಗಳು/ನವೀಕರಣಗಳೊಂದಿಗೆ ಸರಿಪಡಿಸಲಾಗಿದೆ. ಅಲ್ಲದೆ 9 ಹೊಸ ಆಧಾರ್ ಕಾರ್ಡ್‌ಗಳನ್ನು ವಿತರಿಸಲಾಯಿತು.
ಶಿಬಿರ ನಡೆಸಲು ಜಿಲ್ಲಾಧಿಕಾರಿ ವಿಶೇಷ ಅನುಮತಿ ನೀಡಿದ್ದು, ಅದರಂತೆ ಆಧಾರ್ ಕಾರ್ಡ್ ನ ಜಿಲ್ಲಾ ಸಂಯೋಜಕ ರಾಮಕೃಷ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅದಲ್ಲದೆ ಎಪಿಡಿ ಪ್ರತಿಷ್ಠಾನ ಮತ್ತು ಹಸಿರು ದಳವು ತ್ಯಾಜ್ಯ ಹೆಕ್ಕುವವರ ಮಕ್ಕಳಿಗಾಗಿ ಸಂವಾದ ಕಾರ್ಯಕ್ರಮ ಸಹಿತ ವಿಶೇಷ ಶಿಬಿರವನ್ನು ಆಯೋಜಿಸಿತ್ತು. ಅಲ್ಲದೆ ಉಚಿತ ಶಾಲಾ ಬ್ಯಾಗ್‌ಗಳು, ಪುಸ್ತಕಗಳು ಮತ್ತು ಶಾಲಾ ಕಿಟ್‌ಗಳನ್ನು ವಿತರಿಸಿದೆ. ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕ ನವೀನ್ ಪೀಟರ್ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಎಪಿಡಿ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಸಿಇಒ ಅಬ್ದುಲ್ಲಾ ಎ. ರೆಹಮಾನ್ ಮತ್ತಿತರರು ಉಪಸ್ಥಿತರಿದ್ದರು.
.jpeg)







